Select Your Language

Notifications

webdunia
webdunia
webdunia
webdunia

ಚಳಿಗಾಲದಲ್ಲಿ ಮೈ ಬೆಚ್ಚಗಾಗಿಸುವ ಡ್ರಿಂಕ್ಸ್ ಟ್ರೈ ಮಾಡಿ!

ಚಳಿಗಾಲದಲ್ಲಿ ಮೈ ಬೆಚ್ಚಗಾಗಿಸುವ ಡ್ರಿಂಕ್ಸ್ ಟ್ರೈ ಮಾಡಿ!
ಬೆಂಗಳೂರು , ಶನಿವಾರ, 8 ಜನವರಿ 2022 (17:18 IST)
ಅತಿಯಾದ ಚಳಿ ನಮಗೆ ಜ್ವರ ಮತ್ತು ಶೀತವನ್ನು ತಂದು ಕೊಡುತ್ತದೆ. ಇದಕ್ಕೆ ಕಾರಣ ನಮ್ಮ ದೇಹದ ತಾಪಮಾನದಲ್ಲಿ ಆಗುವ ಬದಲಾವಣೆ.

ಹೊರಗಿನ ತಾಪಮಾನಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೆ ನಮ್ಮ ದೇಹ ಕಷ್ಟ ಪಡುವ ಸಂದರ್ಭದಲ್ಲಿ ಈ ರೀತಿ ಆಗುತ್ತದೆ.

ಆದರೆ ಇದನ್ನು ನಾವು ಮೊದಲೇ ಅರಿತುಕೊಂಡು ಆರೋಗ್ಯಕರವಾದ ರೀತಿಯಲ್ಲಿ ಉತ್ತಮ ಆಹಾರ ಶೈಲಿಯನ್ನು ರೂಡಿಸಿಕೊಂಡರೆ ಇದರಿಂದ ಸುಲಭವಾಗಿ ಹೊರ ಬರಬಹುದು ಮತ್ತು ಇಂತಹ ಸಮಸ್ಯೆಗಳು ಕಂಡು ಬರದಂತೆ ತಡೆಗಟ್ಟಬಹುದು.

ಆಪಲ್ ಸೈಡರ್

•ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯದ ಒಂದು ಸಂಶೋಧನೆ ಹೇಳುವ ಪ್ರಕಾರ ಆಪಲ್ ಸೈಡರ್ ವಿನೆಗರ್ ಚಳಿಗಾಲದಲ್ಲಿ ನಿಮ್ಮ ದೇಹದ ಜೀರ್ಣಶಕ್ತಿಯನ್ನು ಹೆಚ್ಚು ಮಾಡುವುದು ಮಾತ್ರವಲ್ಲದೆ
•ಅಂತರಿಕವಾಗಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದರ ಜೊತೆಗೆ ನಿಮ್ಮ ದೇಹದ ತೂಕವನ್ನು ನಿಯಂತ್ರಣ ಮಾಡುವಲ್ಲಿ ಕೂಡ ಇದೆ ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ.

ಶುಂಠಿ ಚಹಾ

•ಶುಂಠಿಯಲ್ಲಿ ನಿಮ್ಮ ದೇಹದ ಅಜೀರ್ಣತೆ ಮತ್ತು ವಾಕರಿಕೆ ಸಮಸ್ಯೆಯನ್ನು ಹೋಗಲಾಡಿಸುವ ಗುಣಲಕ್ಷಣಗಳಿವೆ. ಚಳಿಗಾಲದ ಈ ಸಂದರ್ಭದಲ್ಲಿ ಶುಂಠಿ ಚಹಾ ಕುಡಿಯುವುದು ಹೆಚ್ಚು ಪ್ರಯೋಜನಕಾರಿ.
•ಬಿಸಿ ಬಿಸಿ ಚಹಾ ಕುಡಿಯುವುದರಿಂದ ಚಳಿಗಾಲಕ್ಕೆ ಸಂಬಂಧಪಟ್ಟಂತೆ ಬರುವಂತಹ ಹಲವಾರು ಆರೋಗ್ಯ ಸಮಸ್ಯೆಗಳಿಂದ ನೀವು ಪಾರಾಗಬಹುದು.

ನಿಂಬೆಹಣ್ಣಿನ ಪಾನೀಯ

•ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆ ರಸವನ್ನು ಹಾಕಿ ಕುಡಿಯುವುದರಿಂದ ನಿಮ್ಮ ಲಿವರ್ ಭಾಗ ಮತ್ತು ಕಿಡ್ನಿಗಳ ಭಾಗ ಸ್ವಚ್ಛವಾಗುತ್ತದೆ.
•ನಿಮ್ಮ ದೇಹದಲ್ಲಿ ಕಂಡುಬರುವ ಸಾಕಷ್ಟು ವಿಷಕಾರಿ ಅಂಶಗಳು ದೂರವಾಗಲು ಇದು ಸಹಾಯಮಾಡುತ್ತದೆ. ಚಳಿಗಾಲದಲ್ಲಿ ನಿಮ್ಮ ದೇಹದ ತಾಪಮಾನವನ್ನು ಕೂಡ ಹೆಚ್ಚು ಮಾಡುತ್ತದೆ.

ಬಾದಾಮಿ ಹಾಲು

ನೀವು ಚಳಿಗಾಲದಲ್ಲಿ ಸಾಧಾರಣ ಬಾದಾಮಿ ಹಾಲು ಕುಡಿಯುವ ಬದಲು ಶುಂಠಿ ಮತ್ತು ತೆಂಗಿನ ಎಣ್ಣೆಯನ್ನು ಮಿಶ್ರಣಮಾಡಿ ಕುಡಿಯುವುದರಿಂದ ಚಳಿಗಾಲದ ಹಲವಾರು ರೋಗಲಕ್ಷಣಗಳಿಂದ ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಮೊಡವೆಗಳಿಗೆ ರಾಮಬಾಣ ಈ ಫೇಸ್​ಪ್ಯಾಕ್!