Select Your Language

Notifications

webdunia
webdunia
webdunia
webdunia

ರುಚಿಕರವಾದ ಮೊಸರು ಅವಲಕ್ಕಿ

ಆರೋಗ್ಯ
ಸುಲಭವಾಗಿ ಮಾಡುವ ಅಡುಗೆಯ ರೆಸಿಪಿಗಳನ್ನು ಹುಡುಕುತ್ತಿದ್ದೀರಾ? ಬೆಳಗಿನ ತಿಂಡಿಯನ್ನು ಸಿದ್ಧ ಮಾಡುವುದು ನಿಜಕ್ಕೂ ಸವಾಲಿನ ಕೆಲಸ.
 
ನೀವು ಆಫೀಸ್ಗೆ ಹೋಗುತ್ತಿದ್ದರೆ ಬೆಳಗ್ಗೆ ಅಡುಗೆ ಮಾಡಲು ಸಮಯ ಸಿಗುವುದಿಲ್ಲ. ಹೀಗಾಗಿ ನೀವು 5 ನಿಮಿಷದಲ್ಲಿ ಮಾಡಬಹುದಾದ ರುಚಿಯಾದ ಮೊಸರು ಅವಲಕ್ಕಿ ರೆಸಿಪಿ ಇಲ್ಲಿದೆ ನೋಡಿ. ಒಮ್ಮೆ ಟ್ರೈ ಮಾಡಿ.

ಬೇಕಾಗುವ ಸಾಮಗ್ರಿಗಳು

* ಅವಲಕ್ಕಿ- 1 ಕಪ್
* ಮೊಸರು- 1 ಕಪ್
* ಬೆಲ್ಲ- ಸ್ವಲ್ಪ
* ಡ್ರೈ ಫ್ರೂಟ್ಸ್- ಸ್ವಲ್ಪ
* ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ

* ಮೊದಲು ಅವಲಕ್ಕಿಯನ್ನು ಚೆನ್ನಾಗಿ ತೊಳೆದ ಮೇಲೆ ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಅವಲಕ್ಕಿ ಮತ್ತು ಮೊಸರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. 

* ನಂತರ ಅದಕ್ಕೆ ಸ್ವಲ್ಪ ಉಪ್ಪು, ಬೆಲ್ಲ, ಡ್ರೈ ಫ್ರೂಟ್ಸ್ ಹಾಕಿ ಎಲ್ಲ ಪದಾರ್ಥಗಳು ಸರಿಯಾಗಿ ಮಿಶ್ರಣವಾಗುವವರೆಗೆ ಕಲಸಿಕೊಂಡರೆ ರುಚಿಯಾದ ಮೊಸರು ಅವಲಕ್ಕಿ ಸವಿಯಲು ಸಿದ್ಧವಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರಿ ನಿದ್ರೆಯ ಮಧ್ಯೆ ಎಚ್ಚರವಾಗುತ್ತಿದೆಯೇ?