Select Your Language

Notifications

webdunia
webdunia
webdunia
webdunia

ಸೋಂಕು : ಆತಂಕದಲ್ಲಿ ಕಾಫಿನಾಡಿಗರು!

ಸೋಂಕು : ಆತಂಕದಲ್ಲಿ ಕಾಫಿನಾಡಿಗರು!
ಚಿಕ್ಕಮಗಳೂರು , ಸೋಮವಾರ, 10 ಜನವರಿ 2022 (06:04 IST)
ಚಿಕ್ಕಮಗಳೂರು : ಜಿಲ್ಲೆಯಲ್ಲಿ ನಿತ್ಯ ಸಿಂಗಲ್ ಡಿಜಿಟ್ನಲ್ಲಿದ್ದ ಕೊರೊನಾ ಸೋಂಕಿತರ ಸಂಖ್ಯೆ ಇಂದು ಒಂದೇ ದಿನ 78ಕ್ಕೆ ಏರಿರೋದ್ರಿಂದ ಜಿಲ್ಲೆಯ ಜನ ಆಂತಕಕ್ಕೀಡಾಗಿದ್ದಾರೆ.

ಮೂಡಿಗೆರೆ ಹಾಗೂ ಚಿಕ್ಕಮಗಳೂರು ತಾಲೂಕಿನಲ್ಲಿ ಕೊರೊನಾ ಸ್ಫೋಟಗೊಂಡಿದ್ದು, ಮೂಡಿಗೆರೆಯಲ್ಲಿ 37 ಹಾಗೂ ಚಿಕ್ಕಮಗಳೂರಿನಲ್ಲಿ 17 ಕೇಸ್ ಪತ್ತೆಯಾಗಿವೆ. ಮೂಡಿಗೆರೆಯ ಹಾಸ್ಟೆಲ್ ನಲ್ಲಿ 37 ಮಕ್ಕಳಿಗೆ ಹಾಗೂ ಚಿಕ್ಕಮಗಳೂರಿನ 15 ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. 

ಜಿಲ್ಲೆಯ ಗ್ರಾಮೀಣ ಭಾಗದಲ್ಲೇ ಸೋಂಕು ಹೆಚ್ಚಾಗುತ್ತಿರುವುದು ಗ್ರಾಮೀಣ ಭಾಗದ ಜನರನ್ನ ಮತ್ತಷ್ಟು ಕಂಗೆಡಿಸಿದೆ. ಮೂಡಿಗೆರೆ ತಾಲೂಕಿನ ಬಾಳೂರಿನ ಹಾಸ್ಟೆಲ್ ನಲ್ಲಿ ಮೂವರು ಮಕ್ಕಳಲ್ಲಿ ಸೋಂಕು ಪತ್ತೆಯಾಗಿತ್ತು.

ಹಾಸ್ಟೆಲ್ ನಲ್ಲಿದ್ದ 405 ಮಕ್ಕಳಿಗೂ ಪರೀಕ್ಷೆ ನಡೆಸಿದಾಗ 37 ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. ಚಿಕ್ಕಮಗಳೂರು ನಗರದಲ್ಲಿರುವ ಹಾಸ್ಟೆಲ್ ನಲ್ಲಿ ಆರೋಗ್ಯ ಇಲಾಖೆ ನಡೆಸಿದ ರ್ಯಾಡಮ್ ಟೆಸ್ಟ್ ನಲ್ಲಿ 17 ಮಕ್ಕಳಿಗೆ ಪಾಸಿಟಿವ್ ಪತ್ತೆಯಾಗಿದೆ.

ಚಿಕ್ಕಮಗಳೂರು ಹಾಗೂ ಮೂಡಿಗೆರೆ ಶಾಲೆ ಹಾಗೂ ಕಾಲೇಜಿನ ಎಲ್ಲ ಮಕ್ಕಳಿಗೂ ಹೋಂ ಐಸೋಲೇಶನ್ ಮೂಲಕ ಚಿಕಿತ್ಸೆ ಮುಂದುವರೆಸುತ್ತಿದ್ದು, ಯಾರಿಗೂ ರೋಗದ ಲಕ್ಷಣಗಳು ಇಲ್ಲವೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಲಿಂಗ ತಾರತಮ್ಯ ಹೋಗಲಾಡಿಸುವ ಕ್ರಮ: ಸರ್‌, ಮೇಡಂ ಸಂಬೋಧನೆ ಬಿಟ್ಟ ಕೇರಳದ ಶಾಲೆ