ಹೊಸದಿಲ್ಲಿ : ಭಾರತದಲ್ಲಿ ಕೊರೊನಾ ವೈರಸ್ ಹರಡುವಿಕೆಯ ಮರು ಉತ್ಪಾದನಾ ಸಂಖ್ಯೆಯು ಈ ವಾರ 4ರಷ್ಟು ದಾಖಲಾಗಿದೆ.
ಇದು ಅತ್ಯಧಿಕ ಸೋಂಕು ಪ್ರಸರಣ ದರವಾಗಿದೆ ಎಂದು ಐಐಟಿ ಮದ್ರಾಸ್ ನಡೆಸಿರುವ ಪ್ರಾಥಮಿಕ ಅಧ್ಯಯನ ವರದಿ ತಿಳಿಸಿದೆ. ಫೆಬ್ರವರಿ 1-15ರ ನಡುವೆ ಮೂರನೇ ಅಲೆ ಉತ್ತುಂಗಕ್ಕೆ ತಲುಪಲಿದೆ ಎಂದು ಅದು ಎಚ್ಚರಿಕೆ ನೀಡಿದೆ.
ಮರು ಉತ್ಪಾದನಾ ಸಂಖ್ಯೆ (R-naught ಅಥವಾ R0) ಸೋಂಕಿತ ವ್ಯಕ್ತಿಯೊಬ್ಬ ಕಾಯಿಲೆಯನ್ನು ಎಷ್ಟು ಜನರಿಗೆ ಹರಡಬಹುದು ಎಂಬ ಸಂಖ್ಯೆಯನ್ನು ಸೂಚಿಸುತ್ತದೆ. ಈ ಮೌಲ್ಯವು 1ಕ್ಕಿಂತ ಕಡಿಮೆಯಾದರೆ ಸಾಂಕ್ರಾಮಿಕವು ಅಂತ್ಯಗೊಂಡಿದೆ ಎಂದು ಪರಿಗಣಿಸಲಾಗುತ್ತದೆ.
ಐಐಟಿ ಮದ್ರಾಸ್ ನಡೆಸಿದ ಅಧ್ಯಯನದ ಪ್ರಾಥಮಿಕ ವಿಶ್ಲೇಷಣೆಯ ಪ್ರಕಾರ, ಕಳೆದ ವಾರ ಖ0 ಮೌಲ್ಯವು (ಡಿಸೆಂಬರ್ 25 ರಿಂದ ಡಿ. 31) 2.9ರ ಸಮೀಪ ಇತ್ತು. ಆದರೆ ಅದು ಈ ವಾರ 4ರಷ್ಟು ದಾಖಲಾಗಿದೆ.