Publish Date: Wed, 12 Jan 2022 (12:14 IST)
Updated Date: Wed, 12 Jan 2022 (09:15 IST)
ಬೆಂಗಳೂರು: ಮಗುವಾದ ಮೇಲೆ ನಟಿಯರ ಸಿನಿಮಾ ಬದುಕು ಮುಗಿದೇ ಹೋಯಿತು ಎನ್ನುವ ಕಾಲ ಈಗಿಲ್ಲ. ಇದು ಕನ್ನಡ ನಟಿಯರಿಗೂ ಅನ್ವಯಿಸುತ್ತದೆ.
ಇದೀಗ ಮಯೂರಿ ಕ್ಯಾತರಿ ಮದುವೆಯಾಗಿ, ಮಗನ ಆಗಮನದ ಬಳಿಕ ಮತ್ತೆ ಕಮ್ ಬ್ಯಾಕ್ ಮಾಡಲು ಕಸರತ್ತು ನಡೆಸುತ್ತಿದ್ದಾರೆ.
ಮಗುವಾದ ಬಳಿಕ ಕೊಂಚ ತೂಕ ಹೆಚ್ಚಿಸಿಕೊಂಡಿದ್ದ ಮಯೂರಿ ಈಗ ಜಿಮ್ ನಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಇತ್ತೀಚೆಗೆ ಕಲರ್ಸ್ ಕನ್ನಡ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಮಯೂರಿ ಮತ್ತೆ ಬಣ್ಣದ ಬದುಕಿಗೆ ಮರಳುವ ಸೂಚನೆ ನೀಡಿದ್ದರು. ಈಗ ಅದಕ್ಕೆ ತಕ್ಕ ತಯಾರಿ ಮಾಡಿಕೊಳ್ಳುತ್ತಿದ್ದಾರೆ.