Select Your Language

Notifications

webdunia
webdunia
webdunia
webdunia

ಪಾದಯಾತ್ರೆಗೆ ಗೈರಾದ ಶಿವಣ್ಣ: ಅಭಿಮಾನಿಗಳ ಒತ್ತಡವೇ ಕಾರಣ?

ಪಾದಯಾತ್ರೆಗೆ ಗೈರಾದ ಶಿವಣ್ಣ: ಅಭಿಮಾನಿಗಳ ಒತ್ತಡವೇ ಕಾರಣ?
ಬೆಂಗಳೂರು , ಭಾನುವಾರ, 9 ಜನವರಿ 2022 (10:38 IST)
ಬೆಂಗಳೂರು: ಕಾಂಗ್ರೆಸ್ ನೇತೃತ್ವದ ಮೇಕೆದಾಟು ಪಾದಯಾತ್ರೆಗೆ ನಟ ಶಿವರಾಜ್ ಕುಮಾರ್ ಗೈರು ಹಾಜರಾಗಿದ್ದಾರೆ.

ನಿನ್ನೆ ಶಿವಣ್ಣ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಇಂದು ದಿಡೀರ್ ಶಿವಣ್ಣ ಕಾರ್ಯಕ್ರಮ ರದ್ದುಗೊಳಿಸಿದ್ದಾರೆ. ಆದರೆ ನಟ ದುನಿಯಾ ವಿಜಯ್ ಪಾದಯಾತ್ರೆ ಆರಂಭದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದ್ದಾರೆ.

ಶಿವಣ್ಣ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ ಎಂಬ ಸುದ್ದಿ ಬೆನ್ನಲ್ಲೇ ಕೆಲವು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ನೀವು ಎಲ್ಲಾ ವರ್ಗದವರಿಗೆ ಸೇರಿದ ಪ್ರೀತಿಯ ನಾಯಕ. ನಿಮ್ಮನ್ನು ಒಂದು ಪಕ್ಷದಲ್ಲಿ ಗುರುತಿಸಿಕೊಳ್ಳಲು ಇಷ್ಟಪಡಲ್ಲ. ಡಾ.ರಾಜ್ ಕುಮಾರ್ ಕುಟುಂಬದವರು ಯಾವತ್ತೂ ರಾಜಕೀಯದಲ್ಲಿ ತಲೆ ಹಾಕಿಲ್ಲ. ನೀವು ಕಾಂಗ್ರೆಸ್ ಪಾದಯಾತ್ರೆಯಲ್ಲಿ ಪಾಲ್ಗೊಂಡು ವಿಶ್ವಾಸ ಕಳೆದುಕೊಳ್ಳಬೇಡಿ ಎಂದು ಅನೇಕರು ಕಾಮೆಂಟ್ ಮಾಡಿದ್ದರು. ಬಹುಶಃ ಅಭಿಮಾನಿಗಳ ಈ ಒತ್ತಾಯಕ್ಕೆ ಮಣಿದು ಶಿವಣ್ಣ ಈ ಕಾರ್ಯಕ್ರಮದಿಂದ ದೂರವುಳಿಯಲು ತೀರ್ಮಾನಿಸಿರಬಹುದು ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊವಿಡ್ ಬೆನ್ನಲ್ಲೇ ನಟ ಮಹೇಶ್ ಬಾಬುಗೆ ಸಹೋದರನ ವಿಯೋಗದ ಆಘಾತ