ಬೆಂಗಳೂರು: ಇಂದು ಜನ್ಮದಿನ ಆಚರಿಸಿಕೊಳ್ಳುತ್ತಿರುವ ರಾಕಿಂಗ್ ಸ್ಟಾರ್ ಯಶ್ ಕುಟುಂಬ ಸಮೇತ ಕೇಕ್ ಕಟಿಂಗ್ ಮಾಡಿ ಸೆಲೆಬ್ರೇಷನ್ ಮಾಡಿರುವ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಪತ್ನಿ, ರಾಧಿಕಾ ಮತ್ತು ಪುತ್ರಿ ಐರಾ, ಪುತ್ರ ಯಥರ್ವ್ ಜೊತೆಗೆ ಕೇಕ್ ಕಟಿಂಗ್ ಮಾಡುವ ಫೋಟೋಗಳನ್ನು ಹಂಚಿಕೊಂಡಿರುವ ಯಶ್, ಬರ್ತ್ ಡೇ ನನಗೆ ಯಾವತ್ತೂ ಸಂಭ್ರಮದ ದಿನ ಅಂತ ಅನಿಸಿಲ್ಲ.
ಆದರೆ ನನ್ನ ಮಕ್ಕಳು ಮತ್ತು ನನ್ನ ಸುತ್ತಮುತ್ತಲಿರುವವರಿಗಾಗಿ ಈ ದಿನವನ್ನು ಆಚರಿಸಿಕೊಳ್ಳುತ್ತೇನಷ್ಟೇ. ನನಗೆ ವಿಶ್ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ಯಶ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!