Publish Date: Sun, 09 Jan 2022 (10:14 IST)
Updated Date: Sun, 09 Jan 2022 (10:15 IST)
ಹೈದರಾಬಾದ್: ಇತ್ತೀಚೆಗಷ್ಟೇ ಕೊರೋನಾ ಸೋಂಕಿತರಾಗಿದ್ದ ಟಾಲಿವುಡ್ ಸ್ಟಾರ್ ಮಹೇಶ್ ಬಾಬುಗೆ ಈಗ ಮತ್ತೊಂದು ಆಘಾತ ಎದುರಾಗಿದೆ.
ಸಹೋದರ ರಮೇಶ್ ಬಾಬು ಪಿತ್ತಕೋಶ ಸಂಬಂಧೀ ಅನಾರೋಗ್ಯದಿಂದಾಗಿ ಸಾವನ್ನಪ್ಪಿದ್ದಾರೆ. 56 ವರ್ಷ ವಯಸ್ಸಿನ ರಮೇಶ್ ಬಾಬು ನಿನ್ನೆ ಸಂಜೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮಹೇಶ್ ಬಾಬುರಂತೆ ರಮೇಶ್ ಬಾಬು ಕೂಡಾ ತೆಲುಗು ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಹೆಸರು ಸಂಪಾದಿಸಿದ್ದರು. ಅವರ ನಿಧನಕ್ಕೆ ಟಾಲಿವುಡ್ ಅಭಿಮಾನಿಗಳು, ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ.