Select Your Language

Notifications

webdunia
webdunia
webdunia
webdunia

‘ಜಾಕಿ’ ಭಾವನಾ ಮೆನನ್ ಮನದಾಳದ ನೋವಿಗೆ ಸ್ಪಂದಿಸಿದ ಸಿನಿ ತಾರೆಯರು

‘ಜಾಕಿ’ ಭಾವನಾ ಮೆನನ್ ಮನದಾಳದ ನೋವಿಗೆ ಸ್ಪಂದಿಸಿದ ಸಿನಿ ತಾರೆಯರು
ಬೆಂಗಳೂರು , ಬುಧವಾರ, 12 ಜನವರಿ 2022 (09:00 IST)
ಬೆಂಗಳೂರು: 2017 ರಲ್ಲಿ ತಮ್ಮ ಮೇಲಾದ ಕಿರುಕುಳದ ಬಗ್ಗೆ ಜಾಕಿ ನಟಿ ಭಾವನಾ ಮೆನನ್ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಮನದಾಳದ ಮಾತು ಹಂಚಿಕೊಂಡಿದ್ದರು. ಅವರ ಪೋಸ್ಟ್ ವೈರಲ್ ಆಗಿದ್ದು, ಬಹುತೇಕ ಮಲಯಾಳಂ ಸಿನಿಮಾ ತಾರೆಯರು, ಸ್ಯಾಂಡಲ್ ವುಡ್ ಹಿರಿಯ ನಟಿ ಸುಮಲತಾ ಅಂಬರೀಶ್ , ಮೇಘನಾ ರಾಜ್ ಕೂಡಾ ಭಾವನಾಗೆ ಬೆಂಬಲ ಸೂಚಿಸಿದ್ದಾರೆ.

2017 ರಲ್ಲಿ ತ್ರಿಶ್ಶೂರ್ ನಲ್ಲಿ ಚಿತ್ರೀಕರಣ ಮುಗಿಸಿ ಬರುತ್ತಿದ್ದಾಗ ದುಷ್ಕರ್ಮಿಗಳು ಭಾವನಾರನ್ನು 2 ಗಂಟೆ ಕಾಲ ಕಾರಿನಲ್ಲೇ ತಿರುಗಾಡಿಸಿ ಲೈಂಗಿಕ ಕಿರುಕುಳ ನೀಡಿದ್ದರು. ಈ ಪ್ರಕರಣದಲ್ಲಿ ಮಲಯಾಳಂ ಖ್ಯಾತ ನಟ ದಿಲೀಪ್ ಮೇಲೆ ಆರೋಪವಿದೆ. ಇದರ ವಿಚಾರಣೆ ಈಗಲೂ ನಡೆಯುತ್ತಿದೆ.

ಇದರ ಬಗ್ಗೆ ಭಾವನಾ ಮೊದಲ ಬಾರಿಗೆ ಮಾತನಾಡಿದ್ದು, ತನಗೆ ಬೆಂಬಲವಾಗಿ ನಿಂತವರಿಗೆ ಧನ್ಯವಾದ ಸಲ್ಲಿಸಿದ್ದರು. ಇದೀಗ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್, ಪೃಥ್ವಿ ರಾಜ್, ಟೊವಿನೊ ಥಾಮಸ್, ದಿಲೀಪ್ ಮಾಜಿ ಪತ್ನಿ, ಖ್ಯಾತ ನಟಿ ಮಂಜು ವಾರಿಯರ್ ಸೇರಿದಂತೆ ಅನೇಕರು ಭಾವನಾರನ್ನು ಬೆಂಬಲಿಸಿ ಆ ಪೋಸ್ಟ್ ನ್ನು ರಿಪೋಸ್ಟ್ ಮಾಡಿದ್ದಾರೆ.

ಅಷ್ಟೇ ಅಲ್ಲದೆ, ಸ್ಯಾಂಡಲ್ ವುಡ್ ನಟಿ, ಸಂಸದೆ ಸುಮಲತಾ ಅಂಬರೀಶ್ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ‘ಆಕೆಯ ಧೈರ್ಯ ಮನೋಭಾವವನ್ನು ಮೆಚ್ಚುತ್ತೇನೆ. ಏನೂ ತಪ್ಪು ಮಾಡದೇ ಯಾಕೆ ಮೌನವಾಗಿ ಸಹಿಸಿಕೊಂಡು ಕೂರಬೇಕು?’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಗೆ ಕೊರೋನಾ: ಐಸಿಯುವಿಗೆ ಶಿಫ್ಟ್