Select Your Language

Notifications

webdunia
webdunia
webdunia
webdunia

ಕೊನೆಗೂ ತನಗಾದ ಕಿರುಕುಳದ ಬಗ್ಗೆ ಬಾಯ್ಬಿಟ್ಟ ಜಾಕಿ ನಟಿ ಭಾವನಾ ಮೆನನ್

ಕೊನೆಗೂ ತನಗಾದ ಕಿರುಕುಳದ ಬಗ್ಗೆ ಬಾಯ್ಬಿಟ್ಟ ಜಾಕಿ ನಟಿ ಭಾವನಾ ಮೆನನ್
ಬೆಂಗಳೂರು , ಸೋಮವಾರ, 10 ಜನವರಿ 2022 (17:05 IST)
ಬೆಂಗಳೂರು: 2017 ರಲ್ಲಿ ತಮ್ಮ ಮೇಲೆ ನಡೆದ ಲೈಂಗಿಕ ಕಿರುಕುಳದ ಬಗ್ಗೆ ಇದೀಗ ನಟಿ ಭಾವನಾ ಮೆನನ್ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾಗಿ ಮಾತನಾಡಿದ್ದಾರೆ.

ಚಿತ್ರೀಕರಣ ಮುಗಿಸಿ ಮರಳುತ್ತಿದ್ದಾಗ ತ್ರಿಶ್ಶೂರ್ ನಲ್ಲಿ ಕಾರಿನೊಳಗೇ ಅವರ ಮೇಲೆ ದಾಳಿಯಾಗಿತ್ತು. ಈ ಬಗ್ಗೆ ಮಲಯಾಳಂ ನಟ ದಿಲೀಪ್ ವಿರುದ್ಧ ಆರೋಪ ಮಾಡಲಾಗಿತ್ತು. ಈ ಬಗ್ಗೆ ಅವರ ವಿರುದ್ಧ ಈಗಲೂ ವಿಚಾರಣೆ ನಡೆಯುತ್ತಿದೆ.

ಇದೀಗ ಈ ಪ್ರಕರಣದ ಬಗ್ಗೆ ಭಾವನಾ ಮೆನನ್ ಮಾತನಾಡಿದ್ದಾರೆ. ‘ಈ ಐದು ವರ್ಷದ ಯಾತ್ರೆ ನನ್ನ ಪಾಲಿಗೆ ಸುಲಭವಾಗಿರಲಿಲ್ಲ. ನಾನು ಅಪರಾಧವೆಸಗಿದವಳಲ್ಲ. ಆದರೂ ನನ್ನ ಅವಮಾನಿಸುವ, ನನ್ನ ಧ್ವನಿ ಅಡಗಿಸುವ ಪ್ರಯತ್ನಗಳು ನಡೆದಿತ್ತು. ಆದರೆ ಅಂತಹ ಸಮಯದಲ್ಲಿ ಹಲವರು ನನ್ನನ್ನು ಬೆಂಬಲಿಸಿದರು. ಇಂದಿಗೂ ಹಲವರು ನನ್ನ ಪರವಾಗಿ ಧ‍್ವನಿಯೆಯತ್ತುವುದನ್ನು ನೋಡುವಾಗ ನಾನು ಏಕಾಂಗಿಯಲ್ಲ ಎನಿಸುತ್ತದೆ. ನ್ಯಾಯಕ್ಕೆ ಜಯ ಸಿಗಲು, ತಪ್ಪಿತಸ್ಥರಿಗೆ ಶಿಕ್ಷೆಯಾಗಲು ಮತ್ತು ಮತ್ತೆ ಯಾರೂ ಇಂತಹ ಪರಿಸ್ಥಿತಿ ಎದುರಿಸದೇ ಇರಲು ಈ ಹೋರಾಟ ಮುಂದುವರಿಸುತ್ತೇನೆ. ನನ್ನನ್ನು ಬೆಂಬಲಿಸಿರುವ ನಿಮಗೆಲ್ಲಾ ಧನ್ಯವಾದಗಳು’ ಎಂದು ಯಾರ ಹೆಸರೂ ಉಲ್ಲೇಖಿಸದೇ ಭಾವನಾ ಮೆನನ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ಸೋಂಕಿತರಾದ ಸಾಲು ಸಾಲು ಸೆಲೆಬ್ರಿಟಿಗಳು