Publish Date: Mon, 10 Jan 2022 (10:35 IST)
Updated Date: Mon, 10 Jan 2022 (10:35 IST)
ಕೊಚ್ಚಿ: 2017 ರಲ್ಲಿ ನಟಿಯೊಬ್ಬರ ಮೇಲೆ ಕಾರಿನಲ್ಲಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಾಧಿಕಾರಿಗಳಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಮಲಯಾಳಂ ನಟ ದಿಲೀಪ್ ವಿರುದ್ಧ ಹೊಸದಾಗಿ ಎಫ್ ಐಆರ್ ದಾಖಲಿಸಲಾಗಿದೆ.
ನಟಿಯ ಮೇಲೆ ವೈಯಕ್ತಿಕ ವೈಷಮ್ಯದಿಂದಾಗಿ ದಿಲೀಪ್ ತನ್ನ ಆಪ್ತರಿಂದ ಕಾರಿನಲ್ಲಿ ತೆರಳುತ್ತಿದ್ದಾಗ ಕಿರುಕುಳ, ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಅಂದು ದಿಲೀಪ್ ರನ್ನು ಬಂಧಿಸಿ ಕೆಲವು ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು. ಇದಾದ ಬಳಿಕ ಜಾಮೀನಿನ ಮೇಲೆ ಅವರು ಹೊರಗೆ ಬಂದಿದ್ದರು.
ಈ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಲೇ ಇದೆ. ಆದರೆ ವಿಚಾರಣೆ ನಡೆಸುತ್ತಿದ್ದ ಅಧಿಕಾರಿಗಳ ಮೇಲೆ ದಿಲೀಪ್ ಬೆದರಿಕೆ ಹಾಕಿದ್ದಾರೆಂದು ಆರೋಪಿಸಲಾಗಿದ್ದು, ಈ ಕುರಿತಂತೆ ಕ್ರೈಂ ಬ್ರ್ಯಾಂಚ್ ಅವರ ವಿರುದ್ಧ ಹೊಸದಾಗಿ ಎಫ್ ಐಆರ್ ದಾಖಲಿಸಿದೆ.