Select Your Language

Notifications

webdunia
webdunia
webdunia
webdunia

ಪ್ರಭಾಸ್ - ದೀಪಿಕಾ ಸಿನಿಮಾದಲ್ಲಿ ಈ ಸ್ಟಾರ್ ನಟಿ ನಟಿಸಲಿದ್ದಾರಂತೆ

ಪ್ರಭಾಸ್ - ದೀಪಿಕಾ ಸಿನಿಮಾದಲ್ಲಿ ಈ ಸ್ಟಾರ್ ನಟಿ ನಟಿಸಲಿದ್ದಾರಂತೆ
ಹೈದರಾಬಾದ್ , ಮಂಗಳವಾರ, 18 ಆಗಸ್ಟ್ 2020 (11:16 IST)
ಹೈದರಾಬಾದ್ : ಟಾಲಿವುಡ್ ನಟ ಪ್ರಭಾಸ್ ಹಾಗೂ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೋಡಿಯಾಗಿ ಸಿನಿಮಾ ಮಾಡುತ್ತಿರುವ ವಿಷಯ ಎಲ್ಲರಿಗೂ ತಿಳಿದೆ ಇದೆ. ಆದರೆ ಈ ಸಿನಿಮಾದಲ್ಲಿ ಇದೀಗ ಮತ್ತೊಬ್ಬ ಖ್ಯಾತ ನಟಿ ಪ್ರವೇಶಿಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಹೌದು.  ನಟ ಪ್ರಭಾಸ್ ಹಾಗೂ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೊತೆಯಾಗಿ ನಟಿಸುವ ವಿಚಾರ ಅವರ ಅಭಿಮಾನಿಗಳಿಗೆ ಈಗಾಗಲೇ ಖುಷಿ ನೀಡಿದೆ. ಅದರ ಜೊತೆಗೆ ಇದೀಗ ಈ ಸಿನಿಮಾದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ನಿವೇತಾ ಥಾಮಸ್ ಕಾಣಿಸಿಕೊಳ್ಳಲಿದ್ದಾರಂತೆ.

ಈ ಹಿಂದೆ ನಿವೇತಾ ಥಾಮಸ್ ಈ ಸಿನಿಮಾದಲ್ಲಿ ಪ್ರಭಾಸ್ ಗೆ ಜೋಡಿಯಾಗಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಇವರು ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಇವರು ಈ ಚಿತ್ರದ ಪ್ರಮುಖ ಟ್ವಿಸ್ಟ್ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಲು ಸಾಲು ಸೆಟ್ಟೇರುತ್ತಿರುವ ಕನ್ನಡ ಚಿತ್ರಗಳು