Select Your Language

Notifications

webdunia
webdunia
webdunia
webdunia

ಸಾಲು ಸಾಲು ಸೆಟ್ಟೇರುತ್ತಿರುವ ಕನ್ನಡ ಚಿತ್ರಗಳು

ಸಾಲು ಸಾಲು ಸೆಟ್ಟೇರುತ್ತಿರುವ ಕನ್ನಡ ಚಿತ್ರಗಳು
ಬೆಂಗಳೂರು , ಮಂಗಳವಾರ, 18 ಆಗಸ್ಟ್ 2020 (11:00 IST)
ಬೆಂಗಳೂರು: ಕೊರೋನಾ ಬಳಿಕ ಮತ್ತೆ ಚಿತ್ರರಂಗ ಮರಳಿ ಯಥಾಸ್ಥಿತಿಗೆ ಮರಳುತ್ತಿದೆ. ಇದೀಗ ಪ್ರತಿನಿತ್ಯ ಹೊಸ ಹೊಸ ಸಿನಿಮಾಗಳು ಸೆಟ್ಟೇರುತ್ತಿವೆ.


ಆದರೆ ಚಿತ್ರಮಂದಿರ ತೆರೆಯದ ಕಾರಣ ಬಿಡುಗಡೆಯಾಗುತ್ತಿಲ್ಲ. ವಿಶೇಷವೆಂದರೆ ಸ್ಟಾರ್ ನಟರ ಯಾವುದೇ ಸಿನಿಮಾಗಳೂ ಸೆಟ್ಟೇರಿಲ್ಲ. ಬದಲಾಗಿ ಸಣ್ಣ ಬಜೆಟ್ ನ ಈಗಷ್ಟೇ ತಳವೂರುತ್ತಿರುವ ನಟರ ಸಿನಿಮಾಗಳು ಸೆಟ್ಟೇರುತ್ತಿವೆ.

ಸದ್ಯಕ್ಕೆ ಕನ್ನಡ ಚಿತ್ರರಂಗ ಆರ್ಥಿಕ ಸಂಕಷ್ಟದಲ್ಲಿದ್ದು, ಸಾಮಾನ್ಯ ಬಜೆಟ್ ನ ಸಿನಿಮಾಗಳನ್ನು ಒಟಿಟಿಯಲ್ಲಾದರೂ ಬಿಡುಗಡೆ ಮಾಡಿ ನಷ್ಟವಾಗದಂತೆ ನೋಡಿಕೊಳ್ಳಬಹುದು ಎಂದು ನಿರ್ಮಾಪಕರು ಲೆಕ್ಕಾಚಾರ ಹಾಕುತ್ತಿದ್ದಾರೆ. ಒಂದು ವೇಳೆ ಚಿತ್ರಮಂದಿರ ತೆರೆಯಲು ಒಪ್ಪಿಗೆ ಸಿಕ್ಕರೆ ಮತ್ತೆ ಚಿತ್ರರಂಗ ಸಹಜ ಸ್ಥಿತಿಗೆ ಮರಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುಶಾಂತ್ ಸಿಂಗ್ ಕೇಸ್ ಗೆ ಹೊಸ ಟ್ವಿಸ್ಟ್ ನೀಡಿದ ಮಹಿಳೆ