Select Your Language

Notifications

webdunia
webdunia
webdunia
webdunia

ಮೂರು ಕತೆ ಕೇಳಿ ಬಿಟ್ಟ ಕೋಮಲ್ ಕೊನೆಗೂ ಹೊಸ ಸಿನಿಮಾ ಒಪ್ಪಿಕೊಂಡರು

ಮೂರು ಕತೆ ಕೇಳಿ ಬಿಟ್ಟ ಕೋಮಲ್ ಕೊನೆಗೂ ಹೊಸ ಸಿನಿಮಾ ಒಪ್ಪಿಕೊಂಡರು
ಬೆಂಗಳೂರು , ಸೋಮವಾರ, 17 ಆಗಸ್ಟ್ 2020 (11:48 IST)
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟನಾಗಿ ಕಾಲಿಟ್ಟು ಬಳಿಕ ನಾಯಕ ಪಾತ್ರಕ್ಕೆ ಬಡ್ತಿ ಪಡೆದ ನಟರ ಪೈಕಿ ಕೋಮಲ್ ಕುಮಾರ್ ಕೂಡಾ ಒಬ್ಬರು. ಕೆಂಪೇಗೌಡ 2 ಬಳಿಕ ಕೋಮಲ್ ಈಗ ಹೊಸ ಸಿನಿಮಾ ಒಪ್ಪಿಕೊಂಡ ಸುದ್ದಿ ಬಂದಿದೆ.


ಬಹಳ ದಿನಗಳ ನಂತರ ಕೋಮಲ್ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ನಡುವೆ ಮೂರು ಚಿತ್ರಕತೆ ಕೇಳಿ ಬೇಡವೆನಿಸಿ ಬಿಟ್ಟಿದ್ದರಂತೆ. ಇದೀಗ ಅಂತೂ ಕಾಮಿಡಿ, ಎಂಟರ್ ಟೈನರ್ ಕತೆಯಿರುವ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.

ಈ ಮೊದಲು ಕೆಂಪೇಗೌಡ ಸಿನಿಮಾದಲ್ಲಿ ಸ್ಟ್ರಿಕ್ಟ್ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದರು. ಆದರೆ ಅಲ್ಲಿ ಹೇಳಿಕೊಳ್ಳುವ ಯಶಸ್ಸು ಸಿಕ್ಕಲಿಲ್ಲ. ಹೀಗಾಗಿ ಮತ್ತೆ ಕಾಮಿಡಿ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ರಾಜಶೇಖರ್ ನಿರ್ದೇಶಿಸುತ್ತಿದ್ದು, ಟಿ.ಆರ್ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಾಲಿವುಡ್ ಎಂಟ್ರಿ ಕೊಡಲಿದ್ದಾರೆ ಹಾಟ್ ನಟಿ ಊರ್ವಶಿ ರೌಟೆಲಾ