Publish Date: Sun, 16 Aug 2020 (10:21 IST)
Updated Date: Sun, 16 Aug 2020 (10:22 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಸ್ವಾತಂತ್ರ್ಯೋತ್ಸವ ದಿನವಾದ ನಿನ್ನೆ ಮಾಡಿದ ಒಂದು ಟ್ವೀಟ್ ಅಭಿಮಾನಿಗಳಲ್ಲಿ ಭಾರೀ ಸಂಚಲನ ಮೂಡಿಸಿತ್ತು.
‘ಈ ಬಾರಿ ಹೀರೋ ಅಲ್ಲ, ವಿಲನ್ ಬರ್ತಾ ಇದ್ದಾನೆ’ ಎಂದು ಯಶ್ ಹಿಂದಿಯಲ್ಲಿ ಸಾಲುಗಳನ್ನು ಬರೆದುಕೊಂಡು ವಿಡಿಯೋ ಒಂದನ್ನು ಪ್ರಕಟಿಸಿದ ಯಶ್ ಸೋಮವಾರ ಅಂದರೆ ಆಗಸ್ಟ್ 17 ರಂದು ಬರುವುದಾಗಿ ಹೇಳಿದ್ದಾರೆ.
ಈ ವಿಡಿಯೋ ನೋಡಿ ಒಮ್ಮೆಲೇ ಅಭಿಮಾನಿಗಳಲ್ಲಿ ಸಂಚಲನ ಮೂಡಿದ್ದು, ಯಶ್ ಕೆಜಿಎಫ್ 2 ಟೀಸರ್ ಬಗ್ಗೆ ಹೇಳಿರಬಹುದೇ ಎಂದು ಕುತೂಹಲಗೊಂಡರು. ಆದರೆ ಯಶ್ ವಿಲನ್ ಎನ್ನುವ ಫ್ಯಾಶನ್ ಬ್ರಾಂಡ್ ಬಗ್ಗೆ ಹೇಳಿದ್ದರು. ಆದರೆ ಅಭಿಮಾನಿಗಳು ಮಾತ್ರ ಕೆಜಿಎಫ್ 2 ಬಗ್ಗೆ ಇರಬಹುದು ಎಂಬ ಆಶಾಭಾವದಲ್ಲಿದ್ದಾರೆ.