Publish Date: Mon, 17 Aug 2020 (12:05 IST)
Updated Date: Mon, 17 Aug 2020 (12:07 IST)
ಬೆಂಗಳೂರು: ಕೊರೋನಾದಿಂದಾಗಿ ತಾರೆಯರ ಪ್ರತಿನಿತ್ಯದ ದಿನಚರಿಗೆ ಬ್ರೇಕ್ ಬಿದ್ದಿತ್ತು. ಅದರಲ್ಲೂ ಜಿಮ್ ಗೆ ಹೋಗುವುದನ್ನು ಭಾರೀ ಮಿಸ್ ಮಾಡಿಕೊಂಡಿದ್ದರು. ಇದಕ್ಕೆ ನಟ ಚಂದನ್ ಕುಮಾರ್ ಕೂಡಾ ಹೊರತಲ್ಲ.
ಐದು ತಿಂಗಳ ಬಳಿಕ ಮತ್ತೆ ಜಿಮ್ ಗೆ ಮರಳಿದ ಚಂದನ್ ಅದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.
‘ಮರುಕಳಿಸಿದೆ ವಿಜಯನಗರ ಸಾಮ್ರಾಜ್ಯದ ಕೀರ್ತಿ ಪತಾಕೆ’ ಎಂದು ತಮಾಷೆಯಾಗಿ ಬರೆದುಕೊಂಡಿರುವ ಚಂದನ್ ಮತ್ತೆ ಐದು ತಿಂಗಳ ಬಳಿಕ ಜಿಮ್ ಗೆ ಮರಳಿರುವುದಾಗಿ ಹೇಳಿಕೊಂಡಿದ್ದಾರೆ.