ಹೈದರಾಬಾದ್ : ಮೆಗಾಸ್ಟಾರ್ ರಾಮ್ ಚರಣ್ ಅವರು ಖ್ಯಾತ ನಿರ್ದೇಶಕ ಶಂಕರ್ ಅವರೊಂದಿಗೆ ಹೊಸ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ವಿಚಾರ ಎಲ್ಲರಿಗೂ ತಿಳಿದೆ ಇದೆ.
ಇತ್ತಿಚಿನ ಮಾಹಿತಿ ಪ್ರಕಾರ ರಾಮ್ ಚರಣ್ ಮತ್ತು ಶಂಕರ್ ಅವರ ಆರ್ ಸಿ 15 ನಾಲ್ಕು ಸೂಪರ್ ಸ್ಟಾರ್ ನಟರನ್ನು ಒಳಗೊಂಡಿರುತ್ತದೆ ಎನ್ನಲಾಗಿದೆ. ಈ ಚಿತ್ರದ ನಿರ್ಮಾಪಕರು ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಚಿತ್ರರಂಗದಿಂದ ಸ್ಟಾರ್ ನಟರನ್ನು ಕರೆತರಲು ಯೋಜಿಸುತ್ತಿದ್ದಾರೆ ಎನ್ನಲಾಗಿದೆ.
ಅದರಂತೆ ಈ ಚಿತ್ರದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್, ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್, ಕಾಲಿವುಡ್ ನ ವಿಜಯ್ ಸೇತುಪತಿ, ಹಾಗೂ ಚಿರಂಜೀವಿ ಅಥವಾ ಪವನ್ ಕಲ್ಯಾಣ ಅವರು ನಟಿಸಲಿದ್ದಾರೆ ಎಂಬ ವದಂತಿ ಕೇಳಿಬರುತ್ತಿದೆ. ಇದರ ಚಿತ್ರೀಕರಣ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಪ್ರಾರಂಭವಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.