Publish Date: Thu, 22 Apr 2021 (12:49 IST)
Updated Date: Thu, 22 Apr 2021 (12:52 IST)
ಚೆನ್ನೈ : ನಟ ವಿವೇಕ್ ನಿಧನರಾದ ಬಳಿಕ ಅವರ ಗಿಡನೆಡುವ ಕನಸನ್ನು ನನಸಾಗಿಸಲು ಪರಿಸರ ಕಾರ್ಯಕರ್ತರು ಮತ್ತು ಚಲನಚಿತ್ರೋದ್ಯಮದ ಖ್ಯಾತ ಸಿನಿಮಾ ತಾರೆಯರು ಮುಂದಾಗಿದ್ದಾರೆ.
ನಟ ವಿವೇಕ್ ಅವರು ಮಾಜಿ ರಾಷ್ಟ್ರಪತಿ ದಿ. ಅಬ್ದುಲ್ ಕಲಾಂ ಅವರ ಸಲಹೆ ಮೇರೆಗೆ ಮರ ನೆಡುವ ಕಾರ್ಯಕ್ರಮವನ್ನು ಪ್ರಾರಂಭಿಸಿದರು. 1 ಕೋಟಿ ಮರಗಳನ್ನು ನೆಡುವ ಪ್ಲ್ಯಾನ್ ಮಾಡಿದ್ದು, ಈಗಾಗಲೇ 33.23 ಲಕ್ಷ ಮರಗಳನ್ನು ನೆಟ್ಟಿದ್ದರು.
ಇದೀಗ ಅವರ ಕನಸನ್ನು ನನಸಾಗಿಸಲು ಮುಂದಾದ ನಟರಾದ ಆತ್ಮಿಕಾ ಮತ್ತು ಅರುಣ್ ವಿಜಯ್, ಅವರ ತಂದೆ ವಿಜಯ್ ಕುಮಾರ್ ಮತ್ತು ಮಗ ಅರ್ನವ್ ಸಸಿಗಳನ್ನು ನೆಟ್ಟು ವಿವೇಕ್ ಅವರಿಗೆ ಗೌರವ ಸಲ್ಲಿಸಿದ್ದಾರೆ. ನಿನ್ನೆ ನಟ ಸಿಂಬು ಅವರ ತಂಡ ಸಸಿಗಳನ್ನು ನೆಟ್ಟು ವಿವೇಕ್ ಗೆ ಗೌರವ ಸಲ್ಲಿಸಿದ್ದಾರೆ.