ಚೆನ್ನೈ : ನಟಿ ಜೆನ್ನಿಫರ್ ಅವರು ಕೆಲವು ಚಲನಚಿತ್ರಗಳು ಹಾಗೂ ದೂರದರ್ಶನ ಧಾರವಾಹಿಗಳಲ್ಲಿ ನಟಿಸಿದ್ದಾರೆ. ಅವರು ಮದುವೆ ವಿಚಾರದಿಂದ ಇದೀಗ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.
ನಟಿ ಜೆನ್ನಿಫರ್ ಅವರು ಟೆಲಿ ಸಿರಿಯಲ್ ನಲ್ಲಿ ನಟಿಸುವಾಗ ಸಹಾಯಕ ನಿರ್ದೇಶಕ ನವೀನ್ ಕುಮಾರ್ ಅವರನ್ನು ಪ್ರೀತಿಸುತ್ತಿದ್ದರು. ಹಾಗೇ ಇವರು ಮದುವೆಯಾಗಲು ಯೋಜಿಸಿದ್ದು ಅದಕ್ಕಾಗಿ ಸಕಲ ಸಿದ್ಧತೆ ನಡೆಯುತ್ತಿದೆ. ಆದರೆ ಈ ನಡುವೆ ನಟಿ ಜೆನ್ನಿಫರ್ ಗೆ ಈಗಾಗಲೆ ಮದುವೆಯಾಗಿದ್ದು, ಪತಿಯಿಂದ ಬೇರ್ಪಟ್ಟ ವಿಚಾರ ನವೀನ್ ಅವರಿಗೆ ತಿಳಿದಿದೆ.
ನಟಿ ಈ ವಿಚಾರ ಮುಚ್ಚಿಟ್ಟಿದ್ದಕ್ಕೆ ನವೀನ್ ನಟಿಯ ಕುಟುಂಬದವರನ್ನು ಪ್ರಶ್ನಿಸಲು ಹೋಗಿದ್ದಾರೆ. ಆಗ ನಟಿಯ ಕುಟುಂಬದವರು ನವೀನ್ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.