Select Your Language

Notifications

webdunia
webdunia
webdunia
webdunia

ಸಂದೀಪ್ ಕಿಶನ್ ‘ಗಲ್ಲಿ ರೌಡಿ’ ಚಿತ್ರ ಈ ಚಿತ್ರದ ನಕಲಿಯೇ?

ಸಂದೀಪ್ ಕಿಶನ್ ‘ಗಲ್ಲಿ ರೌಡಿ’ ಚಿತ್ರ ಈ ಚಿತ್ರದ ನಕಲಿಯೇ?
ಚೆನ್ನೈ , ಮಂಗಳವಾರ, 20 ಏಪ್ರಿಲ್ 2021 (08:28 IST)
ಚೆನ್ನೈ : ಸಂದೀಪ್ ಕಿಶನ್ ಅಭಿನಯದ ಮತ್ತು ಜಿ.ನಾಗೇಶ್ವರ ರೆಡ್ಡಿ ನಿರ್ದೇಶನದ ‘ಗಲ್ಲಿ ರೌಡಿ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಆದರೆ ಸಂದೀಪ್ ಕಿಶನ್ ಅವರ ಪಾತ್ರವನ್ನು ತೋರಿಸಿರುವ ಈ ಪೋಸ್ಟರ್ ವಿಜಯ್ ಸೇತುಪತಿ ಚಿತ್ರದಿಂದ  ನಕಲಿ ಮಾಡಿದ್ದು ಎಂದು ಆರೋಪಿಸಲಾಗಿದೆ.

ಹೌದು. ವಿಜಯ್ ಸೇತುಪತಿ ಹಾಗೂ ನಯನತಾರಾ ಅಭಿನಯದ ‘ನಾನುಮ್ ರೌಡಿ ಡಾನ್’ ಚಿತ್ರದಿಂದ ನಕಲಿ ಮಾಡಲಾಗಿದೆ ಎನ್ನಲಾಗಿದೆ. ಗಲ್ಲಿ ರೌಡಿ ಚಿತ್ರ ಒಬ್ಬ ಯುವಕನ ಕಥೆಯನ್ನು ಹೇಳಲಿದ್ದು, ಅವನು ಕೊಲೆಗಡುಕನಾಗಲು ಬಯಸುತ್ತಾನೆ. ಆದರೆ ಆತ ಬೀದಿ ರೌಡಿಯಾಗುತ್ತಾನೆ. ಹಾಗೇ  ನಾನುಮ್ ರೌಡಿ ಡಾನ್’ ಚಿತ್ರದ ಕಥೆ ಹೆಚ್ಚು ಕಡಿಮೆ ಒಂದೇ ಆಗಿದೆ.

ಹಾಗಾಗಿ ನಾಗೇಶ್ವರ್ ರೆಡ್ಡಿ ತಮಿಳು ಚಿತ್ರದ ಹಕ್ಕುಗಳನ್ನು ಖರೀದಿಸಿದ್ದಾರೆಯೇ? ಎಂಬ ಪ್ರಶ್ನೆ ಮೂಡಿದೆ. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪವನ್ ಕಲ್ಯಾಣ್ ಗಾಗಿ ಆಚಾರ್ಯ ಚಿತ್ರದ ಶೂಟಿಂಗ್ ರದ್ದುಪಡಿಸಿದ ರಾಮ್ ಚರಣ್