Select Your Language

Notifications

webdunia
webdunia
webdunia
webdunia

ಕೊರೊನಾ ಸೋಂಕಿಗೆ ಒಳಗಾದ ಕಾಲಿವುಡ್ ನಟ ಅರ್ಥವಾ ಮುರಳಿ

ಕೊರೊನಾ ಸೋಂಕಿಗೆ ಒಳಗಾದ ಕಾಲಿವುಡ್ ನಟ ಅರ್ಥವಾ ಮುರಳಿ
ಚೆನ್ನೈ , ಸೋಮವಾರ, 19 ಏಪ್ರಿಲ್ 2021 (09:26 IST)
ಚೆನ್ನೈ : ಕೊರೊನಾ ವೈರಸ್ ಪ್ರಕರಣ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಈಗಾಗಲೇ ಈ ರೋಗಕ್ಕೆ ಹಲವಾರು ಸಿನಿಮಾ ತಾರೆಯರು ಬಲಿಯಾಗಿದ್ದಾರೆ ಮತ್ತು ಕೆಲವರು ರೋಗದಿಂದ ಬಳಲುತ್ತಿದ್ದಾರೆ.

ಇದೀಗ ಕಾಲಿವುಡ್ ನಟ ಅರ್ಥವಾ ಮುರಳಿ ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಏಪ್ರಿಲ್ 16ರಂದು ಸ್ಯಾಮ್ ಆಂಟನ್ ಅವರೊಂದಿಗೆ ತಮ್ಮ ಚಿತ್ರದ ಟಾಕಿ ಭಾಗಗಳನ್ನು ಪೂರ್ಣಗೊಳಿಸಿದ ನಂತರ ಹೈದರಾಬಾದ್ ನಿಂದ ಹಿಂತಿರುಗಿದ್ದಾರೆ.

ಬಳಿಕ ಅವರಿಗೆ ಕೊರೊನಾ ರೋಗದ ಕೆಲವು ಲಕ್ಷಣ ಕಂಡುಬಂದ ಹಿನ್ನಲೆಯಲ್ಲಿ ಕೊರೊನಾ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂದಿದೆ. ಈ ವಿಚಾರವನ್ನು ಅವರು ಟ್ವೀಟರ್ ನಲ್ಲಿ ತಿಳಿಸಿದ್ದಾರೆ. ಮತ್ತು ಮನೆಯಲ್ಲಿ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದು, ಶೀಘ್ರದಲ್ಲಿಯೇ ಚೇತರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೇರೆ ಯುವಕನೊಂದಿಗೆ ಮದುವೆಯಾಗಲು ಮುಂದಾದ ಪ್ರೇಯಸಿಗೆ ಪ್ರಿಯಕರ ಮಾಡಿದ್ದೇನು?