Select Your Language

Notifications

webdunia
webdunia
webdunia
webdunia

ಅನ್ನಿಯನ್ ರಿಮೇಕ್ ಗೆ ತಡೆಯೊಡ್ಡಿದ ನಿರ್ಮಾಪಕರಿಗೆ ನಿರ್ದೇಶಕ ಶಂಕರ್ ಹೇಳಿದ್ದೇನು?

ಅನ್ನಿಯನ್ ರಿಮೇಕ್ ಗೆ ತಡೆಯೊಡ್ಡಿದ ನಿರ್ಮಾಪಕರಿಗೆ ನಿರ್ದೇಶಕ ಶಂಕರ್ ಹೇಳಿದ್ದೇನು?
ಚೆನ್ನೈ , ಶನಿವಾರ, 17 ಏಪ್ರಿಲ್ 2021 (12:29 IST)
ಚೆನ್ನೈ : ಅನ್ನಿಯನ್ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡಲು ಹೊರಟ ನಿರ್ದೇಶಕ ಶಂಕರ್ ಅವರಿಗೆ ಅನ್ನಿಯನ್ ಚಿತ್ರದ ನಿರ್ಮಾಪಕ ವಿ.ರವಿಚಂದ್ರನ್ ಅವರು ತಡೆಯೊಡ್ಡಿದ್ದು, ಇದಕ್ಕೆ ಶಂಕರ್ ಪ್ರತಿಕ್ರಿಯೆ ನೀಡಿದ್ದಾರೆ.

ನಿರ್ದೇಶಕ ಶಂಕರ್ ಅವರು ಬಾಲಿವುಡ್ ನಟ ರಣವೀರ್ ಸಿಂಗ್ ಅವರೊಂದಿಗೆ ಸೂಪರ್ ಹಿಟ್ ಚಿತ್ರ ಅನ್ನಿಯನ್ ರಿಮೇಕ್ ಮಾಡಲು ಯೋಜಿಸಿದ್ದಾರೆ. ಆದರೆ  ಅನ್ನಿಯನ್ ಚಿತ್ರದ ನಿರ್ಮಾಪಕ ವಿ.ರವಿಚಂದ್ರನ್ ಅವರು ಚಿತ್ರದ ರಿಮೇಕ್ ಅನ್ನು ನಿಲ್ಲಿಸುವಂತೆ ಶಂಕರ್ ಅವರಿಗೆ ಲೀಗಲ್ ನೋಟಿಸ್ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ನಿರ್ದೇಶಕ ಶಂಕರ್ ಅವರು, ಅನ್ನಿಯನ್ ಹಕ್ಕುಗಳು ತನಗೆ ಸೇರಿದವು. ಅನ್ನಿಯನ್ ಕಥೆ ಮತ್ತು ಚಿತ್ರಕಥೆ ತನಗೆ ಸಲ್ಲುತ್ತದೆ. ಬರಹಗಾರ ಸುಜಾತ ಅನ್ನಿಯನ್  ಚಿತ್ರದ ಸಂಭಾಷಣೆ ಬರಹಗಾರನಾಗಿ ಕೆಲಸ ಮಾಡಿದ್ದಾರೆ ಹೊರತು ಕಥೆಯಲ್ಲ ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಒಂದಾಗಲಿದೆ ವೈಷ್ಣವ್ ತೇಜ್ -ಕೃತಿ ಶೆಟ್ಟಿ ಜೋಡಿ