ಚೆನ್ನೈ : ನಟಿ ಶ್ರುತಿ ಹಾಸನ್ ಅವರು ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಅವರು ಕೆಲವೊಮ್ಮೆ ತಮ್ಮ ಅಭಿಮಾನಿಗಳ ಜೊತೆ ಸಂವಹನ ನಡೆಸುತ್ತಿರುತ್ತಾರೆ.
ನಟಿ ಶ್ರುತಿ ಹಾಸನ್ ಅವರು ಖ್ಯಾತ ನಟ ಕಮಲ್ ಹಾಸನ್ ಅವರ ಮಗಳು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಹಾಗಾಗಿ ಅಭಿಮಾನಿಗಳು ನಟಿಯ ಬಳಿ ತಂದೆಯಂತೆ ನೀವು ರಾಜಕೀಯ ಪ್ರವೇಶಿಸುವ ಯೋಚನೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನಟಿ ಶ್ರುತಿ ಹಾಸನ್ ಅವರು, ನನಗೆ ತಂದೆಯಂತೆ ರಾಜಕೀಯ ಪ್ರವೆಶಿಸುವ ಆಸಕ್ತಿ ಇಲ್ಲ. ಈ ಬಗ್ಗೆ ಯೋಚನೆಯೂ ಇಲ್ಲ. ಆದರೆ ರಾಜಕೀಯ ವಿಚಾರದಲ್ಲಿ ತಂದೆಯನ್ನು ಬೆಂಬಲಿಸಲು ತುಂಬಾ ಸಂತೋಷವಾಗುತ್ತದೆ ಎಂದು ತಿಳಿಸಿದ್ದಾರೆ.