Publish Date: Fri, 16 Apr 2021 (08:33 IST)
Updated Date: Fri, 16 Apr 2021 (08:35 IST)
ಮುಂಬೈ: ಐಪಿಎಲ್ 14 ರ ಇಂದಿನ ಪಂದ್ಯದಲ್ಲಿ ಕನ್ನಡಿಗರೇ ನೇತೃತ್ವ ವಹಿಸಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪಂದ್ಯ ನಡೆಯಲಿದೆ.
ಕಳೆದ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧ ರೋಚಕವಾಗಿ 4 ರನ್ ಗಳಿಂದ ಗೆದ್ದಿದ್ದ ಪಂಜಾಬ್ ಗೆ ಇಂದು ಮತ್ತೊಂದು ಜಯದ ನಿರೀಕ್ಷೆಯಿದೆ. ಅತ್ತ ಆರಂಭದಲ್ಲೇ ಸೋಲಿನ ಆಘಾತ ಅನುಭವಿಸಿರುವ ಚೆನ್ನೈಗೆ ಇಂದು ಗೆಲ್ಲುವ ಹಂಬಲ.
ಪಂಜಾಬ್ ಗೆ ನಾಯಕ ಕೆಎಲ್ ರಾಹುಲ್, ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ಬ್ಯಾಟಿಂಗ್ ಮೇಲೆ ಅಪಾರ ಭರವಸೆಯಿದೆ. ಒಂದು ವೇಳೆ ಚೆನ್ನೈ ಈ ಇಬ್ಬರ ವಿಕೆಟ್ ನ್ನು ಬೇಗನೇ ಪಡೆದುಕೊಂಡರೆ ಪಂದ್ಯದ ಮೇಲೆ ಹಿಡಿತ ಸಾಧಿಸಬಹುದು. ಇಂದಿನ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಸಂಜೆ 7.30 ಕ್ಕೆ ಆರಂಭವಾಗಲಿದೆ.