ಮುಂಬೈ: ಕೊರೋನಾದಿಂದ ಬಳಲುತ್ತಿದ್ದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಈಗ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಸಚಿನ್ ಗೆ ಕಳೆದ ವಾರ ಕೊರೋನಾ ಸೋಂಕು ದೃಢಪಟ್ಟಿತ್ತು. ಅದರಂತೆ ಅವರು ಎರಡು ದಿನ ಹೋಂ ಕ್ವಾರಂಟೈನ್ ಗೊಳಗಾಗಿದ್ದರು. ಬಳಿಕ ವೈದ್ಯರ ಸಲಹೆ ಮೇರೆಗೆ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಗುಣಮುಖರಾದ ಹಿನ್ನಲೆಯಲ್ಲಿ ಮನೆಗೆ ಮರಳಿರುವುದಾಗಿ ಸಚಿನ್ ಹೇಳಿದ್ದಾರೆ.
ಇನ್ನೂ ಕೆಲವು ದಿನಗಳ ಕಾಲ ಕ್ವಾರಂಟೈನ್ ನಲ್ಲಿರಲಿದ್ದೇನೆ. ನನಗಾಗಿ ಪ್ರಾರ್ಥಿಸಿದ, ಹಾರೈಸಿದ ಎಲ್ಲರಿಗೂ ಧನ್ಯವಾದಗಳು. ನನ್ನ ಆರೋಗ್ಯ ಸುಧಾರಣೆಗೆ ಶ್ರಮಿಸಿದ ವೈದ್ಯಕೀಯ ಸಿಬ್ಬಂದಿಗಳಿಗೆ ಧನ್ಯವಾದ ಎಂದು ಸಚಿನ್ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಬರೆದಿದ್ದಾರೆ.