ಚೆನ್ನೈ: ಮುಂಬೈ ವಿರುದ್ಧದ ಐಪಿಎಲ್ 14 ಉದ್ಘಾಟನಾ ಪಂದ್ಯಕ್ಕೆ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೇವದತ್ತ್ ಪಡಿಕ್ಕಲ್ ರೂಪದಲ್ಲಿ ಸಿಹಿ ಸುದ್ದಿ ಸಿಕ್ಕಿದೆ.
ಆರ್ ಸಿಬಿ ಓಪನರ್ ಪಡಿಕ್ಕಲ್ ಗೆ ಕೊರೋನಾ ಸೋಂಕು ತಗುಲಿತ್ತು. ಇದೀಗ ಮರು ಪರೀಕ್ಷೆಯಲ್ಲಿ ಅವರಿಗೆ ನೆಗೆಟಿವ್ ವರದಿ ಬಂದಿರುವ ಕಾರಣ ಆರ್ ಸಿಬಿ ಕ್ಯಾಂಪ್ ಗೆ ಮರಳಿದ್ದಾರೆ. ನಾಳೆ ನಡೆಯಲಿರುವ ಮೊದಲ ಪಂದ್ಯದಲ್ಲಿ ಅವರು ಕಣಕ್ಕಿಳಿಯುವ ಸಾಧ‍್ಯತೆಯಿದೆ.
ಇದು ಆರ್ ಸಿಬಿ ಪಾಲಿಗೆ ಸಿಹಿ ಸುದ್ದಿಯಾಗಲಿದೆ. ಈಗ ಆರ್ ಸಿಬಿ ಕ್ಯಾಂಪ್ ಸೇರಿಕೊಂಡಿದ್ದು, ನನಗೆ ಎರಡೂ ಪರೀಕ್ಷೆಗಳಲ್ಲಿ ನೆಗೆಟಿವ್ ವರದಿ ಬಂದಿದೆ ಎಂದು ಸ್ವತಃ ಪಡಿಕ್ಕಲ್ ಹೇಳಿಕೊಂಡಿದ್ದಾರೆ. ಇದರಿಂದಾಗಿ ಕೊಹ್ಲಿಯ ಬಹುದೊಡ್ಡ ತಲೆನೋವು ನಿವಾರಣೆಯಾದಂತಾಗಿದೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!