Select Your Language

Notifications

webdunia
webdunia
webdunia
webdunia

ಹೃದಯಾಘಾತದಿಂದ ತಮಿಳು ಹಾಸ್ಯ ನಟ ವಿವೇಕ್ ನಿಧನ

ಹೃದಯಾಘಾತದಿಂದ ತಮಿಳು ಹಾಸ್ಯ ನಟ ವಿವೇಕ್ ನಿಧನ
ಚೆನ್ನೈ , ಶನಿವಾರ, 17 ಏಪ್ರಿಲ್ 2021 (09:24 IST)
ಚೆನ್ನೈ : ಹೃದಯ ಸ್ತಂಭನದಿಂದ ಬಳಲುತ್ತಿದ್ದ ತಮಿಳು ಹಾಸ್ಯ ನಟ ವಿವೇಕ್ ಅವರು ಇಂದು ಮುಂಜಾನೆ ಚೆನ್ನೈ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಇವರಿಗೆ 59 ವರ್ಷ ವಯಸ್ಸಾಗಿದ್ದು, ಶುಕ್ರವಾರ ಹೃದಯಾಘಾತವಾದ ಹಿನ್ನಲೆಯಲ್ಲಿ ಅವರನ್ನು ಚೆನ್ನೈನ ಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಸಾವನಪ್ಪಿದ್ದಾರೆ. ಅವರ ನಿಧನಕ್ಕೆ ಕಾಲಿವುಡ್ ಚಿತ್ರರಂಗ ಸಂತಾಪ ಸೂಚಿಸಿದೆ.

ಅಲ್ಲದೇ ಗುರುವಾರದಂದು ವಿವೇಕ್ ಕೊರೊನಾ ಲಸಿಕೆ ತೆಗೆದುಕೊಂಡಿದ್ದು, ಈ ಹಿನ್ನಲೆಯಲ್ಲಿ ಅವರ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದಿದೆ ಎಂಬ ಮಾತು ಕೇಳಿಬರುತ್ತಿದೆ.

ವಿವೇಕ್ ಅವರು ಕುಶಿ, ಮಿನ್ನಲೆ, ಅಲೈಪಾಯುಥೆ, ಮುಗಾವರೀ, ದಮ್ ದಮ್ ದಮ್, ಶಿವಾಜಿ, ಫ್ರೆಂಡ್ಸ್, ಅನ್ನಿಯನ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿ ತಮ್ಮ ಹಾಸ್ಯದ ಮೂಲಕ ಜನರ ಮನಗೆದ್ದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿರ್ದೇಶಕ ಶಂಕರ್ ಗೆ ಮತ್ತೆ ಶಾಕ್ ನೀಡಿದ ಮದ್ರಾಸ್ ಹೈಕೋರ್ಟ್