Select Your Language

Notifications

webdunia
webdunia
webdunia
webdunia

ಈ ಟಾಲಿವುಡ್ –ಕಾಲಿವುಡ್ ನಟರಿಬ್ಬರು ಜೊತೆ ಸೇರಿ ಮಾಡಲಿದ್ದಾರಂತೆ ಮಲ್ಟಿಸ್ಟಾರ್ ಚಿತ್ರ

ಈ ಟಾಲಿವುಡ್ –ಕಾಲಿವುಡ್ ನಟರಿಬ್ಬರು ಜೊತೆ ಸೇರಿ ಮಾಡಲಿದ್ದಾರಂತೆ ಮಲ್ಟಿಸ್ಟಾರ್ ಚಿತ್ರ
ಚೆನ್ನೈ , ಮಂಗಳವಾರ, 20 ಏಪ್ರಿಲ್ 2021 (12:07 IST)
ಚೆನ್ನೈ : ಇತ್ತೀಚಿನ ದಿನಗಳಲ್ಲಿ ಮಲ್ಟಿಸ್ಟಾರ್ ಚಿತ್ರಗಳನ್ನು ಹೆಚ್ಚಾಗಿ ನಿರ್ಮಿಸಲಾಗುತ್ತಿದೆ. ಅದೇರೀತಿ ಇತ್ತೀಚಿನ ಮಾಹಿತಿ ಪ್ರಕಾರ ಟಾಲಿವುಡ್ ಹಾಗೂ ಕಾಲಿವುಡ್ ನ ಇಬ್ಬರು ಸ್ಟಾರ್ ನಟರು ಮಲ್ಟಿಸ್ಟಾರ್ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಹೌದು. ಟಾಲಿವುಡ್ ನಟ ಜೂನಿಯರ್ ಎನ್ ಟಿಆರ್ ಹಾಗೂ ಕಾಲಿವುಡ್ ನಟ ವಿಜಯ್ ಅವರು ಜೊತೆ ಸೇರಿ ಮಲ್ಟಿಸ್ಟಾರ್ ಚಿತ್ರವನ್ನು ಮಾಡಲಿದ್ದಾರಂತೆ ಎಂಬ ಸುದ್ದಿ ಹರಿದಾಡುತಿದೆ. ಈ ಯೋಜನೆ ಕಾರ್ಯರೂಪಕ್ಕೆ ಬಂದರೆ ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರಂತೆ.

ಈ ಹಿಂದೆ ವಿಜಯ್ ಅಭಿನಯ್ ವಿಸ್ಲ ಚಿತ್ರವನ್ನು ಜೂನಿಯರ್ ಎನ್ ಟಿಆರ್ ಅಭಿಮಾನಿಗಳು ಬೆಂಬಲಿಸಿದ ಕಾರಣ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಿದೆ. ಹಾಗಾಗಿ ಇಬ್ಬರು ನಟರ ಅಭಿಮಾನಿಗಳು ಅಧಿಕೃತ ಪ್ರಕಟಣೆಗಾಗಿ ಕಾಯುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಸಂಜನಾ ಗಲ್ರಾನಿಗೂ ಕೊರೋನಾ ಸೋಂಕು