ಚೆನ್ನೈ : ನಟ, ಮಾಜಿ ಬಿಗ್ ಬಾಸ್ ತಮಿಳು ಸ್ಪರ್ಧಿ ಡೇನಿಯಲ್ ಅನ್ನಿಪೋಪ್ ಇತ್ತೀಚೆಗೆ ಅಪ್ರಾಪ್ತ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ.
ಡೇನಿಯಲ್ ಅನ್ನಿಪೋಪ್ ಅಪ್ರಾಪ್ತ ಹುಡುಗಿಯೊಂದಿಗೆ ಚಾಟ್ ಗಳ ಸ್ಕ್ರೀನ್ ಶಾಟ್ ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಅವರು ಈ ವಿವಾದದಲ್ಲಿ ಸಿಲುಕಿದ್ದಾರೆ. ಇನ್ ಸ್ಟಾಗ್ರಾಂ ಬಳಕೆದಾರರು ಡೇನಿಯಲ್ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನಟನ ವಕೀಲರು ಮಾನಹಾನಿಕರ ಪದಗಳನ್ನು ಬಳಸಿ ಸಮಾಜದಲ್ಲಿ ಡೇನಿಯಲ್ ಅವರ ಪ್ರತಿಷ್ಠೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.