Publish Date: Thu, 22 Apr 2021 (09:09 IST)
Updated Date: Thu, 22 Apr 2021 (09:11 IST)
ಮುಂಬೈ: ಐಪಿಎಲ್ 14 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಯಾತ್ರೆ ಮುಂದುವರಿದಿದೆ. ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ 18 ರನ್ ಗಳ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿತು. ಮತ್ತೆ ಅತ್ಯುತ್ತಮ ಬ್ಯಾಟಿಂಗ್ ಮುಂದುವರಿಸಿದ ಫಾ ಡು ಪ್ಲೆಸಿಸ್ ಅಜೇಯ 95 ರನ್ ಗಳಿಸಿದರು. ಋತುರಾಜ್ ಗಾಯಕ್ ವಾಡ್ 64 ರನ್ ಗಳಿಸಿ ಉತ್ತಮ ಸಾಥ್ ನೀಡಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಕೆಕೆಆರ್ ಉತ್ತಮ ಹೋರಾಟ ನಡೆಸಿದರೂ ಅಂತಿಮವಾಗಿ 19.1 ಓವರ್ ಗಳಲ್ಲಿ 202 ರನ್ ಗಳಿಗೆ ಆಲೌಟ್ ಆಯಿತು. ಪ್ಯಾಟ್ ಕ್ಯುಮಿನ್ಸ್ 66, ಆಂಡ್ರೆ ರಸೆಲ್ 54 ಮತ್ತು ದಿನೇಶ್ ಕಾರ್ತಿಕ್ 40 ರನ್ ಗಳಿಸಿದರು.