ಚೆನ್ನೈ: ತಾನು ಪ್ರಬಲ ತಂಡವೆಂಬ ಭ್ರಮೆಯಲ್ಲಿದ್ದ ಮುಂಬೈ ಇಂಡಿಯನ್ಸ್ ಗೆ ರಿಷಬ್ ಪಂತ್ ನೇತೃತ್ವದ ಡೆಲ್ಲಿ ಸೋಲಿನ ಶಾಕ್ ನೀಡಿದೆ.
ನಿನ್ನೆಯ ಪಂದ್ಯದಲ್ಲಿ ಮುಂಬೈ 6 ವಿಕೆಟ್ ಗಳ ಸೋಲುಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಘಟಾನುಘಟಿ ಬ್ಯಾಟಿಂಗ್ ದೈತ್ಯರನ್ನು ಹೊಂದಿದ್ದ ಮುಂಬೈ ತಂಡವನ್ನು ಡೆಲ್ಲಿ 20 ಓವರ್ ಗಳಲ್ಲಿ 9 ವಿಕೆಟ್ ಗೆ ಕೇವಲ 137 ರನ್ ಗಳಿಗೆ ಕಟ್ಟಿ ಹಾಕಿತು. ಡೆಲ್ಲಿ ಪರ ಸ್ಪಿನ್ನರ್ ಅಮಿತ್ ಮಿಶ್ರಾ 4 ವಿಕೆಟ್ ಕಬಳಿಸಿದರು. ಮುಂಬೈ ಪರ ರೋಹಿತ್ ಶರ್ಮಾ 44 ರನ್ ಗಳಿಸಿದ್ದೇ ಗರಿಷ್ಠ ಸಾಧನೆ.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಡೆಲ್ಲಿ ಕೂಡಾ ನಿಧಾನಗತಿಯ ಬ್ಯಾಟಿಂಗ್ ಮಾಡಿತು. ಶಿಖರ್ ಧವನ್ ತಮ್ಮ ಉತ್ತಮ ಫಾರ್ಮ್ ಮುಂದುವರಿಸಿ 45 ರನ್ ಗಳಿಸಿದರು. ಇವರಿಗೆ ಅನುಭವಿ ಸ್ಟೀವ್ ಸ್ಮಿತ್ ಸಾಥ್ ನೀಡಿದರು. ಇದರಿಂದಾಗಿ ಡೆಲ್ಲಿ 19.1 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 138 ರನ್ ಗಳಿಸುವ ಮೂಲಕ ಗೆಲುವು ಸಾಧಿಸಿತು.