Publish Date: Tue, 20 Apr 2021 (09:08 IST)
Updated Date: Tue, 20 Apr 2021 (09:10 IST)
ಮುಂಬೈ: ಐಪಿಎಲ್ 14 ರಲ್ಲಿ ಆರಂಭದ ಪಂದ್ಯ ಸೋತಿದ್ದ ಚೆನ್ನೈ ಈಗ ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಗೆಲುವಿನ ಹಳಿಗೆ ಮರಳಿದೆ.
ನಿನ್ನೆಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 45 ರನ್ ಗಳಿಂದ ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ ಕೆ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. ಫಾ ಡು ಪ್ಲೆಸಿಸ್ 33, ಅಂಬಟಿ ರಾಯುಡು27, ಮತ್ತು ಮೊಯಿನ್ ಅಲಿ 26 ರನ್ ಗಳಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಲಷ್ಟೇ ಶಕ್ತವಾಯಿತು. ಜೋಸ್ ಬಟ್ಲರ್ 49 ರನ್ ಗಳಿಸಿದರೂ ಪ್ರಯೋಜನವಾಗಲಿಲ್ಲ.