Publish Date: Mon, 19 Apr 2021 (09:17 IST)
Updated Date: Mon, 19 Apr 2021 (09:19 IST)
ಮುಂಬೈ: ಐಪಿಎಲ್ 14 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಇಂದಿನ ಹಣಾಹಣಿ ನಡೆಯಲಿದೆ.
ಕಳೆದ ಪಂದ್ಯ ಗೆದ್ದಿರುವ ಧೋನಿ ಪಡೆಗೆ ಈಗ ಅದೇ ಜಯದ ಸರಣಿಯನ್ನು ಮುಂದುವರಿಸಿಕೊಂಡು ಹೋಗುವ ನಿರೀಕ್ಷೆಯಿದೆ. ಆಡಿದ ಎರಡು ಪಂದ್ಯಗಳ ಪೈಕಿ ಒಂದು ಗೆದ್ದು, ಇನ್ನೊಂದು ಸೋತಿರುವ ಚೆನ್ನೈ ಈಗ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.
ಅತ್ತ ರಾಜಸ್ಥಾನ್ ರಾಯಲ್ಸ್ ಕೂಡಾ ಇದೇ ಸ್ಥಿತಿಯಲ್ಲಿದೆ. ಎರಡು ಪಂದ್ಯಗಳಿಂದ ಒಂದು ಗೆಲುವು ಕಂಡಿರುವ ರಾಜಸ್ಥಾನ್ ಐದನೇ ಸ್ಥಾನದಲ್ಲಿದ್ದು, ಈ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಮೇಲೇರುವ ವಿಶ್ವಾಸದಲ್ಲಿದೆ. ಇಂದಿನ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.