ಚೆನ್ನೈ: ಐಪಿಎಲ್ 14 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ದುರಾದೃಷ್ಟ ಮುಂದುವರಿದಿದೆ. ಮೂರನೇ ಪಂದ್ಯದಲ್ಲಿ ಸೋಲುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಜಾರಿದೆ.
ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಹೈದರಾಬಾದ್ 13 ರನ್ ಗಳ ಸೋಲನುಭವಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿತು.
ಈ ಸಾಧಾರಣ ಮೊತ್ತ ಬೆನ್ನತ್ತುವಲ್ಲಿ ಎಡವಿದ ಹೈದರಾಬಾದ್ 19.4 ಓವರ್ ಗಳಲ್ಲಿ 137 ರನ್ ಗಳಿಗೆ ಆಲೌಟ್ ಆಯಿತು. ಜಾನಿ ಬೇರ್ ಸ್ಟೋ 43, ಡೇವಿಡ್ ವಾರ್ನರ್ 36 ಮತ್ತು ವಿಜಯ್ ಶಂಕರ್ 28 ರನ್ ಗಳಿಸಿದರು. ಮುಂಬೈ ಪರ ಉತ್ತಮ ದಾಳಿ ಸಂಘಟಿಸಿದ ರಾಹುಲ್ ಚಹರ್, ಟ್ರೆಂಟ್ ಬೌಲ್ಟ್ ತಲಾ 3 ವಿಕೆಟ್ ಕಬಳಿಸಿದರು.