Publish Date: Sat, 17 Apr 2021 (10:06 IST)
Updated Date: Sat, 17 Apr 2021 (10:08 IST)
ಮುಂಬೈ: ಐಪಿಎಲ್ 14 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಬೆನ್ ಸ್ಟೋಕ್ಸ್ ರೂಪದಲ್ಲಿ ಆಘಾತ ಸಿಕ್ಕಿದೆ. ಗಾಯಗೊಂಡ ಸ್ಟೋಕ್ಸ್ ತವರಿಗೆ ಮರಳಲಿದ್ದಾರೆ.
ಇಂಗ್ಲೆಂಡ್ ಮೂಲದ ಆಲ್ ರೌಂಡರ್ ಬೆನ್ ಸ್ಟೋಕ್ಸ್ ರಾಜಸ್ಥಾನ್ ತಂಡದ ಪ್ರಮುಖ ಆಟಗಾರ. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಬೆರಳಿನ ಗಾಯಕ್ಕೊಳಗಾಗಿದ್ದರು. ಅದೀಗ ಗಂಭೀರವಾಗಿದ್ದು, ಅವರು ಶಸ್ತ್ರಚಿಕಿತ್ಸೆಗೊಳಗಾಗಲಿದ್ದಾರೆ.
ಹೀಗಾಗಿ ಶನಿವಾರ ಇಂಗ್ಲೆಂಡ್ ಗೆ ಮರಳಲಿರುವ ಸ್ಟೋಕ್ಸ್ ಲೀಡ್ಸ್ ನಲ್ಲಿ ಬೆರಳಿನ ಮುರಿತಕ್ಕೆ ಶಸ್ತ್ರಚಿಕಿತ್ಸೆಗೊಳಗಾಗಲಿದ್ದಾರೆ. ಹೀಗಾಗಿ ಅವರು ಈ ಐಪಿಎಲ್ ನಿಂದ ಸಂಪೂರ್ಣವಾಗಿ ಹೊರಗುಳಿಯಬೇಕಾಗಿದೆ.