Select Your Language

Notifications

webdunia
webdunia
webdunia
webdunia

ಐಪಿಎಲ್ 14: ನಿಷೇಧದ ಭೀತಿಯಲ್ಲಿ ಧೋನಿ

ಐಪಿಎಲ್ 14: ನಿಷೇಧದ ಭೀತಿಯಲ್ಲಿ ಧೋನಿ
ಮುಂಬೈ , ಶನಿವಾರ, 17 ಏಪ್ರಿಲ್ 2021 (10:09 IST)
ಮುಂಬೈ: ಐಪಿಎಲ್ 14 ರಲ್ಲಿ ಕಳಪೆ ಪ್ರದರ್ಶನದ ಜೊತೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೊಂದು ಭೀತಿ ಎದುರಾಗಿದೆ. ವಿಶೇಷವಾಗಿ ಧೋನಿ ಒತ್ತಡದಲ್ಲಿದ್ದಾರೆ.


ಡೆಲ್ಲಿ ವಿರುದ್ಧದ ಮೊದಲ ಪಂದ್ಯದಲ್ಲಿ ಧೋನಿ ಪಡೆ ಸೋಲನುಭವಿಸಿತ್ತು. ಅಲ್ಲದೆ ಧೋನಿ ಎರಡನೇ ಎಸೆತಕ್ಕೇ ಶೂನ್ಯಕ್ಕೆ ಔಟಾಗಿದ್ದರು. ಇದರ ಜೊತೆಗೆ ಆ ಪಂದ್ಯದಲ್ಲಿ ನಿಗದಿತ ಸಮಯದಲ್ಲಿ ಓವರ್ ಪೂರೈಸದೇ ಇದ್ದಿದ್ದಕ್ಕೆ ಧೋನಿ 12 ಲಕ್ಷ ರೂ. ದಂಡ ಪಾವತಿ ಮಾಡಬೇಕಾಗಿ ಬಂದಿತ್ತು.

ಮುಂದಿನ ಪಂದ್ಯದಲ್ಲೂ ಧೋನಿ ಇದೇ ತಪ್ಪು ಮುಂದುವರಿಸಿದರೆ ಒಂದು ಪಂದ್ಯದ ನಿಷೇಧದ ಶಿಕ್ಷೆ ಅನುಭವಿಸಬೇಕಾಗಬಹುದು. ಬಿಸಿಸಿಐ ನಿಯಮಗಳ ಪ್ರಕಾರ ಎರಡನೇ ಬಾರಿಯೂ ಅದೇ ತಪ್ಪು ಮಾಡಿದರೆ ತಂಡದ ನಾಯಕನಿಗೆ ನಿಷೇಧದ ಶಿಕ್ಷೆ ನೀಡಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಸ್ಥಾನ್ ರಾಯಲ್ಸ್ ಗೆ ಶಾಕ್ ಕೊಟ್ಟ ಬೆನ್ ಸ್ಟೋಕ್ಸ್, ತವರಿಗೆ ವಾಪಸ್