Publish Date: Sun, 18 Apr 2021 (08:59 IST)
Updated Date: Sun, 18 Apr 2021 (09:02 IST)
ಚೆನ್ನೈ: ಐಪಿಎಲ್ 14 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕೊತ್ತಾ ನೈಟ್ ರೈಡರ್ಸ್ ನಡುವೆ ಮೊದಲ ಪಂದ್ಯ ನಡೆಯಲಿದೆ.
ಭಾನುವಾರದ ಧಮಾಕ ಎಂಬಂತೆ ಇಂದು ಎರಡು ಪಂದ್ಯಗಳಿದ್ದು ಮೊದಲನೆಯದ್ದರಲ್ಲಿ ಅಗ್ರಸ್ಥಾನಿ ಆರ್ ಸಿಬಿಗೆ ಆರನೇ ಸ್ಥಾನದಲ್ಲಿರುವ ಕೆಕೆಆರ್ ಎದುರಾಳಿ. ಆರ್ ಸಿಬಿ ಇದುವರೆಗೆ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ಅಗ್ರಸ್ಥಾನಿಯಾಗಿದೆ.
ಆದರೆ ಅತ್ತ ಕೋಲ್ಕೊತ್ತಾಗೆ ಎರಡು ಪಂದ್ಯಗಳ ಪೈಕಿ ಒಂದರಲ್ಲಿ ಸೋಲು-ಒಂದರಲ್ಲಿ ಗೆಲುವು ಸಿಕ್ಕಿದೆ. ಹೀಗಾಗಿ ಆರ್ ಸಿಬಿಗೆ ಅಚ್ಚರಿಯ ಆಘಾತ ಕೊಟ್ಟರೂ ಕೊಡಬಹುದು. ಮೊದಲ ಪಂದ್ಯ ಇಂದು ಅಪರಾಹ್ನ 3.30 ಕ್ಕೆ ಆರಂಭವಾಗಲಿದೆ.