Publish Date: Mon, 19 Apr 2021 (09:42 IST)
Updated Date: Mon, 19 Apr 2021 (09:44 IST)
ಚೆನ್ನೈ: ಐಪಿಎಲ್ ನಲ್ಲಿ ಭರ್ಜರಿ ಫಾರ್ಮ್ ಪ್ರದರ್ಶಿಸುತ್ತಿರುವ ದ.ಆಫ್ರಿಕಾ ಮೂಲದ ಆರ್ ಸಿಬಿ ಕ್ರಿಕೆಟಿಗ ಎಬಿಡಿ ವಿಲಿಯರ್ಸ್ ಗೆ ಈಗ ರಾಷ್ಟ್ರೀಯ ತಂಡಕ್ಕೆ ಮತ್ತೆ ಮರಳುವ ಆಸೆಯಾಗಿದೆ.
ದ.ಆಫ್ರಿಕಾ ರಾಷ್ಟ್ರೀಯ ತಂಡದಿಂದ ನಿವೃತ್ತಿ ಘೋಷಿಸಿದ್ದ ಎಬಿಡಿ ಮತ್ತೆ ನಿವೃತ್ತಿ ನಿರ್ಧಾರ ಹಿಂಪಡೆದು ಮುಂಬರುವ ವಿಶ್ವಕಪ್ ನಲ್ಲಿ ಆಡುವ ಬಯಕೆ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ತನಗೆ ವಿಶ್ವಕಪ್ ನಲ್ಲಿ ಆಡಲು ರಾಷ್ಟ್ರೀಯ ತಂಡದಲ್ಲಿ ಅವಕಾಶ ನೀಡುವುದಾದರೆ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿಯಲು ಸಿದ್ಧ ಎಂದು ಅವರು ಹೇಳಿದ್ದಾರೆ.
ಎಬಿಡಿ ಆರ್ ಸಿಬಿ ಪರ ಆಡುತ್ತಿರುವ ಪರಿ ನೋಡಿದರೆ ದ.ಆಫ್ರಿಕಾ ಕ್ರಿಕೆಟ್ ಮಂಡಳಿ ಕೂಡಾ ಇದಕ್ಕೆ ಮನಸ್ಸು ಮಾಡಬಹುದು ಎನಿಸುತ್ತಿದೆ. ಆದರೆ ಈ ಮೊದಲು ಏಕದಿನ ವಿಶ್ವಕಪ್ ತಂಡದಲ್ಲಿ ಎಬಿಡಿಗೆ ಸ್ಥಾನ ನೀಡಲು ಅಂದಿನ ಆಡಳಿತ ಮಂಡಳಿ ನಿರಾಕರಿಸಿತ್ತು. ಆದರೆ ಈಗ ಎಬಿಡಿ ಆಹ್ವಾನವನ್ನು ಸ್ವೀಕರಿಸಿದರೂ ಅಚ್ಚರಿಯಿಲ್ಲ.