ಹೈದರಾಬಾದ್ : ಟಾಲಿವುಡ್ ನಲ್ಲಿ ಕನ್ನಡ ಚಿತ್ರ ಬಿಡುಗಡೆಗೆ ತಡೆಯೊಡ್ಡಿದ್ದಾರೆ ಎಂದು ಆರೋಪಿಸಿ ಸ್ಯಾಂಡಲ್ ವುಡ್ ಸಿನಿಮಾ ನಟರು ಟಾಲಿವುಡ್ ವಿರುದ್ಧ ಆಕ್ರೋಶಗೊಂಡಿದ್ದರು. ಈ ಬಗ್ಗೆ ಇದೀಗ ತೆಲುಗು ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಪ್ರತಿಕ್ರಿಯೆ ನೀಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ತೆಲುಗು ಫಿಲ್ಮ್ ಚೇಂಬರ್ ಆಫ್ ಕಾಮರ್ಸ್, ಕನ್ನಡ ಡಬ್ಬಿಂಗ್, ರಿಮೇಕ್ ಚಿತ್ರಗಳಿಗೆ ನಾವು ತಡೆ ನೀಡಿಲ್ಲ. ಕನ್ನಡ ಸಿನಿಮಾಗಳ ರಿಲೀಸ್ ಗೆ ಯಾವುದೇ ಅಡ್ಡಿ ಇಲ್ಲ . ಆಂಧ್ರಪ್ರದೇಶ, ತೆಲಂಗಾಣದಲ್ಲಿ ಕನ್ನಡ ಸಿನಿಮಾಗಳನ್ನು ರಿಲೀಸ್ ಮಾಡಬಹುದು ಎಂದು ಸ್ಪಷ್ಟನೆ ನೀಡಿದೆ.