Publish Date: Sat, 06 Feb 2021 (11:18 IST)
Updated Date: Sat, 06 Feb 2021 (11:19 IST)
ಹೈದರಾಬಾದ್ : ಟಾಲಿವುಡ್ ನ ಸ್ಟಾರ್ ನಟ ಪ್ರಭಾಸ್ ಅವರ ಮದುವೆ ವಿಚಾರ ಈ ಹಿಂದೆ ಹಲವು ಬಾರಿ ಸುದ್ದಿಮಾಡಿತ್ತು. ನಟಿ ಅನುಷ್ಕಾ ಜೊತೆ ಪ್ರಭಾಸ್ ಮದುವೆಯಾಗಲಿದ್ದಾರೆ ಎಂಬ ವದಂತಿ ಹಬ್ಬಿಸಲಾಗಿತ್ತು. ಆದರೆ ಇದೀಗ ಮತ್ತೆ ನಟ ಪ್ರಭಾಸ್ ಅವರ ಮದುವೆ ವಿಚಾರ ಸುದ್ದಿ ಮಾಡುತ್ತಿದೆ.
ಇತ್ತೀಚಿಗೆ ಕೇಳಿಬಂದ ಮಾಹಿತಿ ಪ್ರಕಾರ ಪ್ರಭಾಸ್ ಅವರು ಕೃಷಂ ರಾಜು ಅವರ ಪತ್ನಿಯ ಕುಟುಂಬದಿಂದ ಹುಡುಗಿಯನ್ನು ಹುಡುಕುತ್ತಿದ್ದಾರೆ. ಅವರು ಅಮೇರಿಕಾದಲ್ಲಿ ಸೆಟಲ್ ಆಗಿದ್ದಾರೆ ಎನ್ನಲಾಗಿದೆ. ಅವರು ಅಮೇರಿಕಾದಲ್ಲಿ ಸಾಫ್ಟ್ ವೇರ್ ಕಂಪೆನಿಗಳ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂಬ ವದಂತಿ ಇದೆ.