Select Your Language

Notifications

webdunia
webdunia
webdunia
webdunia

ತಮ್ಮ ನೆಚ್ಚಿನ ನಟನನ್ನು ನೋಡಲು ಕಾಲ್ನಡಿಗೆಯಲ್ಲಿ ಬಂದ ವೆಂಕಟೇಶ್ ಅಭಿಮಾನಿ

ತಮ್ಮ ನೆಚ್ಚಿನ ನಟನನ್ನು ನೋಡಲು ಕಾಲ್ನಡಿಗೆಯಲ್ಲಿ ಬಂದ ವೆಂಕಟೇಶ್ ಅಭಿಮಾನಿ
ಹೈದರಾಬಾದ್ , ಶನಿವಾರ, 6 ಫೆಬ್ರವರಿ 2021 (10:34 IST)
ಹೈದರಾಬಾದ್ : ಇತ್ತೀಚಿನ ದಿನಗಳಲ್ಲಿ ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಕಾಲ್ನಡಿಗೆಯಲ್ಲಿ ನಡೆದು ಬರುತ್ತಿದ್ದಾರೆ. ಅದೇ ರೀತಿ ಇದೀಗ ನಟ ವೆಂಕಟೇಶ್ ಅಭಿಮಾನಿಯೊಬ್ಬರು ಇದೀಗ ಕಾಲ್ನಡಿಯಲ್ಲಿ ಬಂದಿದ್ದರು.

ಶ್ರೀನಿವಾಸ್ ಎಂಬ ವೆಂಕಟೇಶ್ ಅಭಿಮಾನಿ ತಮ್ಮ ಸ್ವಂತ ಊರು ತಾಂಡೂರು ಬಳಿಯ ಬುದ್ಧರಾಮ್ ನಿಂದ ಹೈದರಾಬಾದ್ ನ ರಾಮನೈಡು ಸ್ಟುಡಿಯೋಗೆ ಬಂದಿದ್ದಾರೆ. ಈ ಹಿಂದೆ 2 ಬಾರಿ ಬಂದಾಗಲು ವೆಂಕಟೇಶ್ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ.

ಪ್ರಸ್ತುತ ವೆಕಂಟೇಶ್ ಅವರು ಚಿತ್ರದ ಶೂಟಿಂಗ್ ನಿಮಿತ್ತ ಹೈದರಾಬಾದ್ ನಲ್ಲಿ ಇರದ ಕಾರಣ ಮತ್ತೆ ಶ್ರೀನಿವಾಸ್ ಗೆ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ಅವರು ಶೂಟಿಂಗ್ ನಿಂದ ಬಂದ ಬಳಿಕ ತಿಳಿಸುವುದಾಗಿ ರಾಮನೈಡು ಸ್ಟುಡಿಯೋ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಉಪ್ಪೇನ್’ ಚಿತ್ರದ ಟ್ರೀಲರ್ ನ್ನು ಬಿಡುಗಡೆ ಮಾಡಿದ ಜೂನಿಯರ್ ಎನ್ ಟಿಆರ್