Select Your Language

Notifications

webdunia
webdunia
webdunia
webdunia

ರೈತರಿಗೆ ಬೆಂಬಲಿಸುವಂತೆ ಟಾಲಿವುಡ್ ಸ್ಟಾರ್ ನಟರ ಮೇಲೆ ಒತ್ತಡ ಹೇರುತ್ತಿರುವ ನೆಟಿಜನ್

ರೈತರಿಗೆ ಬೆಂಬಲಿಸುವಂತೆ ಟಾಲಿವುಡ್ ಸ್ಟಾರ್ ನಟರ ಮೇಲೆ ಒತ್ತಡ ಹೇರುತ್ತಿರುವ ನೆಟಿಜನ್
ಹೈದರಾಬಾದ್ , ಶನಿವಾರ, 6 ಫೆಬ್ರವರಿ 2021 (09:51 IST)
ಹೈದರಾಬಾದ್ : ಅಂತರಾಷ್ಟ್ರೀಯ ಪಾಪ್ ಗಾಯಕ ರಿಹನ್ನಾ ಇತ್ತೀಚೆಗೆ ಪಂಜಾಬ್ ರೈತರನ್ನು ಬೆಂಬಲಿಸಿ ಭಾರತ ಸರ್ಕಾರದ ವಿರುದ್ಧ ಟ್ವೀಟ್ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಇದೀಗ ರೈತರಿಗೆ ಬಿಂಬಲಿಸುವಂತೆ ಟಾಲಿವುಡ್ ಸ್ಟಾರ್ ಗಳ ಮೇಲೆ ನೆಟಿಜನ್ ಗಳು ಒತ್ತಡ ಹೇರುತ್ತಿದ್ದಾರೆ.

ಟಾಲಿವುಡ್ ನ ಸ್ಟಾರ್ ನಟ ಮಹೇಶ್ ಬಾಬು ಅವರ ಮೇಲೆ ಈ ಬಗ್ಗೆ ಒತ್ತಡ ಹೆಚ್ಚಾಗಿದೆ ಎನ್ನಲಾಗಿದೆ. ಮಹರ್ಪಿಯಲ್ಲಿ ರೈತರನ್ನು ಕಾಡುತ್ತಿರುವ ಸಮಸ್ಯೆಗಳ ವಿರುದ್ಧ ಹೋರಾಡುತ್ತಿದ್ದ ಮಹೇಶ್ ಬಾಬು ಈಗ ಏಕೆ ಪ್ರತಿಕ್ರಿಯಿಸುತ್ತಿಲ್ಲ ಎಂದು ನೆಟಿಜನ್ ಪ್ರಶ್ನಿಸುತ್ತಿದ್ದಾರೆ.

ಮಹೇಶ್ ಬಾಬು, ರಾಮ್ ವರಣ್, ಜೂನಿಯರ್ ಎನ್ ಟಿಆರ್ , ಅಲ್ಲುಅರ್ಜುನ್  ನಂತಹ ಸ್ಟಾರ್ ನಟರು ತೆಲುಗು ರಾಜ್ಯಗಳಲ್ಲಿ ರೈತರ ಸಮಸ್ಯೆಗಳನ್ನು ಕೇಳುವ ಮೂಲಕ ರೈತರನ್ನು ಆರ್ಥಿಕವಾಗಿ ಬೆಂಬಲಿಸಿದರೆ ಉತ್ತಮ ಎಂದು ಕೆಲವು ನೆಟಿಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುರಿ ಜಗನ್ನಾಥ್ ಮತ್ತು ರವಿತೇಜ ಕಾಂಬೀನೆಷನ್ ನಲ್ಲಿ ಮೂಡಿಬರಲಿದೆ ಮತ್ತೊಂದು ಚಿತ್ರ