ಹೈದರಾಬಾದ್ : ನಿರ್ದೇಶಕ ಹರೀಶ್ ಶಂಕರ್ ಮತ್ತು ನಿರ್ಮಾಪಕ ಬಾಂದ್ಲಾ ಗಣೇಶ್ ಅವರು ಪವನ್ ಕಲ್ಯಾಣ್ ಅವರ ಜೊತೆ ಗಬ್ಬರ್ ಸಿಂಗ್ ಚಿತ್ರವನ್ನು ಮಾಡಿದ್ದರು.
ಆದರೆ ಈ ಚಿತ್ರದ ಬಳಿಕ ಇವರಿಬ್ಬರ ನಡುವೆ ವಿವಾದ ಏರ್ಪಟ್ಟಿದ್ದು ಇಬ್ಬರು ಟ್ವೀಟರ್ ನಲ್ಲಿ ವಾರ್ ಶುರು ಮಾಡಿ ಬೇರೆಯಾದರು. ಆದರೆ ಇತ್ತೀಚೆಗೆ ಪವನ್ ಕಲ್ಯಾಣ್ ಅವರ ತೆಲುಗು ರಿಮೇಕ್ ಅಯ್ಯಪ್ಪನೂಮ್ ಕೊಶಿಯಮ್ ಚಿತ್ರದ ಶೂಟಿಂಗ್ ನಡೆಯುತ್ತಿದ್ದ ಸ್ಥಳಕ್ಕೆ ನಿರ್ದೇಶಕ ಹರೀಶ್ ಶಂಕರ್ ಮತ್ತು ನಿರ್ಮಾಪಕ ಬಾಂದ್ಲಾ ಗಣೇಶ್ ಭೇಟಿ ನೀಡಿ ಪವನ್ ಕಲ್ಯಾಣ್ ಜೊತೆ ಇಬ್ಬರು ತಾವು ಮಾಡುತ್ತಿರುವ ಚಿತ್ರದ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.