ಹೈದರಾಬಾದ್ : ಟಾಲಿವುಡ್ ನ ಸ್ಟಾರ್ ನಿರ್ದೇಶಕ ರಾಜಮೌಳಿ ಅವರು ಹಲವಾರು ಸಂದರ್ಶನಗಳಲ್ಲಿ ಸ್ಟಾರ್ ನಟ ಮಹೇಶ್ ಬಾಬು ಅವರೊಂದಿಗೆ ಚಿತ್ರ ಮಾಡುವುದಾಗಿ ಹೇಳಿದ್ದಾರೆ. ಇದೀಗ ಈ ಮಾತು ನಿಜವಾಗಲಿದೆ ಎನ್ನಲಾಗಿದೆ.
ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಈಗಾಗಲೇ ಒಂದು ಕಥೆಯನ್ನು ಸಿದ್ದಪಡಿಸಿದ್ದಾರಂತೆ. ಆರ್ ಆರ್ ಆರ್ ಚಿತ್ರ ಪೂರ್ಣಗೊಂಡ ಬಳಿಕ ರಾಜಮೌಳಿ ಈ ಕಥೆಯ ಕಡೆಗೆ ಗಮನಹರಿಸಲಿದ್ದಾರೆ ಎನ್ನಲಾಗಿದೆ. ಅಲ್ಲದೇ ನಿರ್ಮಾಪಕ ಕೆ.ಎಲ್ ನಾರಾಯಣ ಅವರು ರಾಜಮೌಳಿ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ಚಿತ್ರಕ್ಕಾಗಿ 250 ಕೋಟಿ ರೂ,ಗಳ ಬಜೆಟ್ ಹಾಕಲು ಸಿದ್ಧರಿದ್ದಾರೆ ಎನ್ನಲಾಗಿದೆ. ಈ ಚಿತ್ರದ ಬಗ್ಗೆ ಮುಂದಿನ ವರ್ಷ ಅಧಿಕೃತವಾಗಿ ಪ್ರಕಟಣೆ ಹೊರಡಲಿದೆ ಎನ್ನಲಾಗಿದೆ.