Select Your Language

Notifications

webdunia
webdunia
webdunia
webdunia

ಅನುಷ್ಕಾ ಶೆಟ್ಟಿ ಅಭಿನಯದ ‘ನಿಶಬ್ಧಂ’ ಚಿತ್ರದ ಟ್ರೈಲರ್ ಬಿಡುಗಡೆ

ಅನುಷ್ಕಾ ಶೆಟ್ಟಿ ಅಭಿನಯದ ‘ನಿಶಬ್ಧಂ’ ಚಿತ್ರದ ಟ್ರೈಲರ್ ಬಿಡುಗಡೆ
ಹೈದರಾಬಾದ್ , ಮಂಗಳವಾರ, 22 ಸೆಪ್ಟಂಬರ್ 2020 (11:54 IST)
ಹೈದರಾಬಾದ್ : ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅಭಿನಯದ ‘ನಿಶಬ್ಧಂ’ ಚಿತ್ರದ ಟ್ರೈಲರ್ ನ್ನುಸೋಮವಾರ ಬಿಡುಗಡೆ ಮಾಡಲಾಗಿದೆ.

ಇದರಲ್ಲಿ ನಟಿ ಅನುಷ್ಕಾ ‍ಶೆಟ್ಟಿ ಕಿವಿ ಕೇಳದ, ಮಾತು ಬಾರದ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಸಿದ್ಧ ಸಂಗೀತಗಾರ ಆಂಥೋನಿ ಪಾತ್ರದಲ್ಲಿ ಮಾಧವನ್ ನಟಿಸುತ್ತಿದ್ದಾರೆ. ಅನುಷ್ಕಾ ಶೆಟ್ಟಿ ಹಾಗೂ ಮಾಧವನ್ ಹೇಗೆ ಭೇಟಿಯಾಗುತ್ತಾರೆ ಮತ್ತು ಅಲ್ಲಿಂದ ಏನಾಗುತ್ತದೆ ಎಂಬುದು ಈ ಸುಂದರವಾದ ಕಥೆಯ ತಿರುಳಾಗಿದೆ.

ಅರ್ಜುನ್ ರೆಡ್ಡಿ ಖ್ಯಾತಿಯ ಸಾಲಿನಿ ಪಾಂಡೆ ಈ ಚಿತ್ರದಲ್ಲಿ ಅನುಷ್ಕಾ ಸ್ನೇಹಿತೆಯ ಪಾತ್ರ ಮಾಡಿದ್ದಾರೆ. ಅಂಜಲಿ ಹಾಗು ಹಾಲಿವುಡ್ ನಟ ಮೈಕಲ್ ಮ್ಯಾಡ್ಸೆನ್ ತನಿಖಾಧಿಕಾರಿಗಳಾಗಿ ನಟಿಸಿದ್ದಾರೆ. ಈ ಚಿತ್ರ ಅಕ್ಟೋಬರ್ 2ರಂದು ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾದಿಂದ ನಿಧನರಾದ ತಮಿಳು ನಟ ರುಬೆನ್ ಜೇ