Publish Date: Sun, 20 Sep 2020 (11:57 IST)
Updated Date: Sun, 20 Sep 2020 (11:58 IST)
ಹೈದರಾಬಾದ್ : ಕನ್ನಡದ ಖ್ಯಾತ ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ತೆಲುಗು ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರ ಬಹಿರಂಗಗೊಂಡಿದೆ.
ಮೆಗಾಸ್ಟಾರ್ ಚಿರಂಜೀವಿ ಅವರ ಕುಟುಂಬದ ಕುಡಿ ವರುಣ್ ತೇಜ್ ಅವರ ವಿಟಿ10 ಸಿನಿಮಾದಲ್ಲಿ ನಟ ಉಪೇಂದ್ರ ಅವರು ನಟಿಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಉಪೇಂದ್ರ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ನಟ ವರುಣ್, ನಿಮ್ಮೊಂದಿಗೆ ನಟಿಸಲು ಕಾತುರನಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಆ ಮೂಲಕ ಉಪೇಂದ್ರ ಅವರು ತೆಲುಗಿನಲ್ಲಿ ನಟಿಸುತ್ತಿರುವ ವಿಚಾರ ಬಹಿರಂಗಗೊಂಡಿದೆ.