Publish Date: Fri, 18 Sep 2020 (11:12 IST)
Updated Date: Fri, 18 Sep 2020 (11:13 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇಂದು ಘಟಾನುಘಟಿಗಳ ಬರ್ತ್ ಡೇ ಸಂಭ್ರಮ. ಸಾಹಸಸಿಂಹ ವಿಷ್ಣುವರ್ಧನ್ ಜತೆಗೆ ರಿಯಲ್ ಸ್ಟಾರ್ ಉಪೇಂದ್ರ, ಶ್ರುತಿಗೂ ಇಂದು ಜನ್ಮದಿನದ ಸಂಭ್ರಮ.
ರಿಯಲ್ ಸ್ಟಾರ್ ಉಪೇಂದ್ರ ಬರ್ತ್ ಡೇ ಅಂಗವಾಗಿ ಅವರ ಕಬ್ಜ ಸಿನಿಮಾದ ಥೀಮ್ ಪೋಸ್ಟರ್ ನ್ನು ಖ್ಯಾತ ನಿರ್ದೇಶಕ ರಾಮಗೋಪಾಲ್ ವರ್ಮಾ ಬಿಡುಗಡೆ ಮಾಡಿದ್ದಾರೆ. ಇನ್ನು, ನಟಿ ಶ್ರುತಿ ಕೂಡಾ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ಅವರಿಗೆ ಪುತ್ರಿ ಗೌರಿ ಭಾವುಕ ಸಂದೇಶಗಳ ಜತೆಗೆ ಶುಭಾಷಯ ಕೋರಿದ್ದಾರೆ.