Publish Date: Thu, 17 Sep 2020 (17:07 IST)
Updated Date: Thu, 17 Sep 2020 (17:08 IST)
ಬೆಂಗಳೂರು: ಪ್ರಧಾನಿ ಮೋದಿಗೆ ಇಂದು ಜನ್ಮದಿನದ ಸಂಭ್ರಮ. ಈ ವೇಳೆ ಅವರಿಗೆ ಶುಭ ಕೋರುತ್ತಾ ಸ್ಯಾಂಡಲ್ ವುಡ್ ನಟಿ ಸುಧಾರಾಣಿ ಮೋದಿ ಜತೆಗಿನ ಸುಂದರ ಫೋಟೋವೊಂದನ್ನು ಪ್ರಕಟಿಸಿದ್ದಾರೆ.
ಪ್ರಧಾನಿ ಮೋದಿ ಜತೆಗೆ ತಾವು, ಪುತ್ರಿ ತೆಗೆಸಿಕೊಂಡಿರುವ ಫೋಟೋವೊಂದನ್ನು ಪ್ರಕಟಿಸಿರುವ ಸುಧಾರಾಣಿ ಮೋದಿ ಅಂದು ನೀಡಿದ್ದ ಆಟೋಗ್ರಾಫ್ ನ್ನೂ ಪ್ರದರ್ಶಿಸಿದ್ದಾರೆ. ಹಿಂದಿಯಲ್ಲಿ ಸುಧಾರಾಣಿ ಪುತ್ರಿ ನಿಧಿಗೆ ಅಟೋಗ್ರಾಫ್ ನೀಡಿದ್ದ ಮೋದಿ ‘ಸಂಸ್ಕಾರ್ ಕಿ ನಿಧಿ ಹೇ ಸ್ವಾಭಿಮಾನ್’ ಎಂದು ಸುಂದರವಾಗಿ ಕೈಬರಹದಲ್ಲಿ ನೀಡಿ ಉಡುಗೊರೆ ಕೊಟ್ಟಿದ್ದರಂತೆ. ಈ ಫೋಟೋಗಳನ್ನು ಸುಧಾರಾಣಿ ಹಂಚಿಕೊಂಡಿದ್ದಾರೆ.