Publish Date: Thu, 17 Sep 2020 (10:36 IST)
Updated Date: Thu, 17 Sep 2020 (10:38 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ತನಿಖೆ ಎದುರಿಸುತ್ತಿರುವ ನಟ ದಿಗಂತ್ ತಾವು ಒಪ್ಪಿಕೊಂಡಿರುವ ಸಿನಿಮಾ ಶೂಟಿಂಗ್ ಗೆ ಅಡ್ಡಿ ಮಾಡದೇ ಇರಲು ತೀರ್ಮಾನಿಸಿದ್ದಾರೆ.
ಸಿಸಿಬಿ ವಿಚಾರಣೆಯಿಂದಾಗಿ ದಿಗಂತ್ ಈಗ ಬೆಂಗಳೂರು ಬಿಟ್ಟು ಹೊರಗೆಲ್ಲೂ ಹೋಗುವ ಹಾಗಿಲ್ಲ. ಆದರೆ ಈ ನಡುವೆ ದಿಗಂತ್ ಮಾರಿಗೋಲ್ಡ್ ಸಿನಿಮಾ ಶೂಟಿಂಗ್ ಹಾಜರಾಗಲಿದ್ದಾರೆ ಎಂದು ಪತ್ನಿ ಐಂದ್ರಿತಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ತಮ್ಮ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಐಂದ್ರಿತಾ ನಾವು ರೂಲ್ಸ್ ಫಾಲೋ ಮಾಡ್ಬೇಕಾಗುತ್ತದೆ. ಸಿಸಿಬಿ ತನಿಖೆ ಬಗ್ಗೆ ಏನೂ ಹೇಳಲ್ಲ ಎಂದಿದ್ದು ದಿಗಂತ್ ನಾಳೆಯಿಂದ ಶೂಟಿಂಗ್ ಹೋಗ್ತಾರಾ ಎಂಬ ಪ್ರಶ್ನೆಗೆ ಹೌದು ಹೋಗ್ತಾರೆ ಎಂದಷ್ಟೇ ಹೇಳಿದ್ದಾರೆ.