Publish Date: Thu, 17 Sep 2020 (10:09 IST)
Updated Date: Thu, 17 Sep 2020 (10:11 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟಾರ್ ದಂಪತಿ ದಿಗಂತ್-ಐಂದ್ರಿತಾರನ್ನು ನಿನ್ನೆ ಸಿಸಿಬಿ ಅಧಿಕಾರಿಗಳು ತನಿಖೆ ನಡೆಸಿದ್ದರು. ಇದೀಗ ಎನ್ ಸಿಬಿ ಕೂಡಾ ಇಬ್ಬರನ್ನೂ ತನಿಖೆಗೊಳಪಡಿಸುವ ಸಾಧ‍್ಯತೆಯಿದೆ ಎನ್ನಲಾಗಿದೆ.
ಇಬ್ಬರನ್ನೂ ನಿನ್ನೆ ವಿಚಾರಣೆಗೊಳಪಡಿಸಿದ್ದ ಸಿಸಿಬಿ ಮತ್ತೆ ಕರೆಸುವುದಾಗಿ ಹೇಳಿಕಳುಹಿಸಿತ್ತು. ಇದೀಗ ಡ್ರಗ್ ಕಿಂಗ್ ಪಿನ್ ಅನಿಕಾ ಹೇಳಿಕೆ ಪ್ರಕಾರ ಎನ್ ಸಿಬಿ ಕೂಡಾ ಸ್ಟಾರ್ ದಂಪತಿ ವಿರುದ್ಧ ಸಾಕ್ಷ್ಯ ಕಲೆ ಹಾಕಿದ್ದು, ಅವರೂ ತನಿಖೆಗೊಳಪಡಿಸುವ ಸಾಧ‍್ಯತೆಯಿದೆ ಎನ್ನಲಾಗಿದೆ. ಹೀಗಾಗಿ ಸಿಸಿಬಿ ವಿಚಾರಣೆ ಮುಗಿದರೂ ದಿಗ್ಗಿ-ಆಂಡಿ ಜೋಡಿಗೆ ಸಂಕಟ ತಪ್ಪದು.